ಕಿರುತೆರೆ ಶೋಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ: ತಾಯಿಯಾದ ಬಳಿಕ ಮತ್ತೆ ವೃತ್ತಿ ಆರಂಭ

ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ತಮ್ಮ ಅಭಿನಯಕ್ಕೆ ಹೆಸರುವಾಸಿಯಾಗಿರುವ ನಟಿ ಅದಿತಿ ಪ್ರಭುದೇವ ಅವರು ಬಹಳ ದಿನಗಳ ಬಳಿಕ ಕಿರುತೆರೆಗೆ ಮರಳಲು ಸಿದ್ಧರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ‘ರಾಜಾ ರಾಣಿ’ ಮೂರನೇ ಸೀಸನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ದೊರತಿದೆ.

Aditi Prabhudeva joining raja rani tv reality show after many years
Image Credit: Instagram/Aditi Prabhudeva

ನಿಮಗೆ ತಿಳಿದಿರುವ ಹಾಗೆ, ಈ ಕಾರ್ಯಕ್ರಮವು ಅದರ ಹಿಂದಿನ ಎರಡು ಸೀಸನ್‌ಗಳೊಂದಿಗೆ ಈಗಾಗಲೇ ಅಪಾರ ಯಶಸ್ಸನ್ನು ಗಳಿಸಿದೆ. ಈ ಶೋನ ಎರಡನೇ ಸೀಸನ್‌ನಲ್ಲಿ ನಟ-ನಿರ್ದೇಶಕ ಸೃಜನ್ ಲೋಕೇಶ್ ಮತ್ತು ನಟಿ ತಾರಾ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈಗ, ‘ರಾಜಾ ರಾಣಿ ರಿಲೋಡೆಡ್’ ಎಂಬ ಶೀರ್ಷಿಕೆಯ ಮೂರನೇ ಸೀಸನ್ ಶುರುವಾಗುತ್ತಿದೆ ಹಾಗು ಇದರಲ್ಲಿ ಅದಿತಿ ಪ್ರಭುದೇವ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ದೊರಕಿದೆ. ಈ ಸುದ್ದಿಯನ್ನು ಸ್ವತಃ ಅದಿತಿ ಪ್ರಭುದೇವರವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ರಾಜಾ ರಾಣಿ’ ಸೆಲೆಬ್ರಿಟಿ ಜೋಡಿಗಳಿಗಾಗಿ ಇರುವ ರಿಯಾಲಿಟಿ ಶೋ ಆಗಿದ್ದು, ವೀಕ್ಷಕರನ್ನು ಬಹಳ ಇಂಪ್ರೆಸ್ ಮಾಡಿತ್ತು. ಮೊದಲ ಸೀಸನ್‌ನಲ್ಲಿ ಕಿರುತೆರೆ ನಟಿ ನೇಹಾ ಗೌಡ ಮತ್ತು ಅವರ ಪತಿ ಚಂದನ್ ಟ್ರೋಫಿಯನ್ನು ಗೆದ್ದಿದ್ದರು. ನಂತರ, ಎರಡನೇ ಸೀಸನ್ ನಲ್ಲಿ ನಟಿ ಕಾವ್ಯಾ ಮಹದೇವ್ ಮತ್ತು ಪತಿ ಕುಮಾರ್ ಜೋಡಿ ರಾಜಾ ರಾಣಿ ಯಾಗಿ ಗೆದ್ದು ಸಂಭ್ರಮಿಸಿದ್ದರು.

ಈ ಮೂರನೇ ಸೀಸನ್ “ರಾಜ ರಾಣಿ ರಿಲೋಡೆಡ್” ಎಂಬ ಶೀರ್ಷಿಕೆಯೊಂದಿಗೆ ಬರುತ್ತಿದ್ದು, ಅದರ ಪ್ರೊಮೊ ಬಿಡುಗಡೆಯಾಗಿದೆ ಮತ್ತು ಈ ಬಾರಿಯ ವಿಶೇಷತೆ ಏನಿರಬಹುದು ಎಂದು ಪ್ರೇಕ್ಷಕರಲ್ಲಿ ಕೂತುಹಲ ಹೆಚ್ಚಿಸಿದೆ. ಇದರ ಜೊತೆಗೆ, ನಟಿ ಅದಿತಿ ಪ್ರಭುದೇವ ಕಿರುತೆರೆಗೆ ಮರಳುತ್ತಿರುವ ಸಂತೋಷದ ಸುದ್ದಿಯು ಪ್ರೇಕ್ಷಕರು ಮತ್ತು ಅವರ ಅಭಿಮಾನಿಗಳಿಗೆ ಅಪಾರ ಸಂತೋಷವನ್ನು ತಂದಿದೆ.

ಮದುವೆಯಾದ ಬಳಿಕ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದ ಅದಿತಿ

Aditi Prabhhudeva and her husband
Image Credit: Instagram/Aditi Prabhudeva

ನಟಿ ಅದಿತಿ ಪ್ರಭುದೇವ ಅವರು ನಾಗಕನ್ನಿಕೆ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಯವಾದರು ಮತ್ತು ಅದರಲ್ಲಿನ ಅವರ ನಟನೆ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನಂತರ ಬೆಳ್ಳಿಪರದೆಗೆ ಹಾರಿದ ಅದಿತಿ ‘ಧೈರ್ಯಮ್’, ‘ಸಿಂಗಂ’, ‘ಓಲ್ಡ್ ಮಾಂಕ್’, ‘ರಂಗನಾಯಕಿ’, ‘ತೋತಾಪುರಿ’, ಮತ್ತು ‘ಲವ್’ ಹೀಗೆ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ತಮ್ಮ ಪ್ರತಿಭೆಯನ್ನು ಪ್ರೂವ್ ಮಾಡಿಕೊಂಡಿದ್ದಾರೆ.

28 ನವಂಬರ್ 2022 ರಂದು ಯಶಸ್ ಪಟ್ಲಾ ಅವರೊಂದಿಗೆ ಅದಿತಿ ಮದುವೆಯಾಗುತ್ತಾರೆ. ನಂತರ, ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ ಶುರು ಮಾಡಿ ಅವರ ಲೈಫ್ಸ್ಟೈಲ್ ಗೆ ಸಂಬಂಧಿಸಿದ ವೀಡಿಯೊಗಳನ್ನು ಅಪ್ಲೋಡ್ ಮಾಡುವ ಮೂಲಕ ಪ್ರೇಕ್ಷಕರೊಂದಿಗೆ ತನ್ನ ಸಂಪರ್ಕವನ್ನು ವಿಸ್ತರಿಸಿದರು.

ಕೆಲವು ತಿಂಗಳುಗಳ ಹಿಂದೆಯಷ್ಟೇ ಒಂದು ಹೆಣ್ಣು ಮಗುವಿಗೆ ತಾಯಿಯಾದ ಅದಿತಿ ಪ್ರಭುದೇವ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದರು. ಆದಾಗ್ಯೂ, ಅವರು ಈಗ ತಮ್ಮ ವೃತ್ತಿಜೀವನದತ್ತ ತಮ್ಮ ಗಮನವನ್ನು ಬದಲಾಯಿಸುತ್ತಿದ್ದಾರೆ ಮತ್ತು ಮುಂಬರುವ ‘ರಾಜಾ ರಾಣಿ ರಿಲೋಡೆಡ್’ ಸೀಸನ್ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಈ ಹೊಸ ಸೀಸನ್ ನಲ್ಲಿ ಅದಿತಿ ಪ್ರಭುದೇವ ಮತ್ತೊಮ್ಮೆ ಹೇಗೆ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ ಎಂದು ಕಾದುನೋಡಬೇಕಿದೆ.

Similar Posts

Leave a Reply

Your email address will not be published. Required fields are marked *