ಕೋಟಿ ಬೆಲೆಯ ಕಾರು ಖರೀಧಿಸಿದ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ

ನಾನು ಅಂದರೆ ನಂಬರ್, ನಂಬರ್ ಅಂದರೆ ನಾನು ಎಂದು ಹೇಳುವ ಮೂಲಕ ಕರ್ನಾಟಕದ ಮನೆ ಮಾತಾದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ. ಮೊದಲು ಟಿವಿಯಲ್ಲಿ ಸಂಖ್ಯಾಶಾಸ್ತ್ರದ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆರ್ಯವರ್ಧನ್, ನಂತರ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು.

Aryavardhan Guruji of Big Boss fame bought a car worth crores

ಈಗ ಬಂದಿರುವ ಹೊಸ ಸುದ್ದಿಯೆಂದರೆ, ಆರ್ಯವರ್ಧನ್ ದುಬಾರಿ ಬೆಲೆಯ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ಹೊಸ ಕಾರಿನ ಜೊತೆ ನಿಂತಿರುವ ಆರ್ಯವರ್ಧನ್ ರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

ಈ ನಂಬರ್ ಗುರೂಜಿ, ರೇಂಜ್ ರೋವರ್ ಸ್ಪೆಷಲ್ ಎಡಿಶನ್ ಕಾರು ಖರೀದಿಸಿದ್ದಾರೆ ಅನ್ನೋ ಮಾಹಿತಿಗಳು ಬಹಿರಂಗಾಗಿವೆ. ಈ ಹೊಸ ಕಾರಿನ ಬೆಲೆ ಸರಿಸುಮಾರು 2.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ನಂಬರ್ ಅಂದರೆ ನಾನು, ನಾನು ಎಂದರೆ ನಂಬರ್ ಎಂದು ಹೇಳಿ ಎಲ್ಲರಿಗೂ ಸಂಖ್ಯಾಶಾಸ್ತ್ರದ ಸೂಚನೆ ನೀಡುವ ಆರ್ಯವರ್ಧನ್ ತಮ್ಮ ಹೊಸ ಕಾರಿಗೆ ಯಾವ ನಂಬರ್ ಅನ್ನು ಪಡೆಯುತ್ತಾರೆ ಎಂದು ಎಲ್ಲರ ಕೂತಹಲ ಹೆಚ್ಚಾಗಿದೆ.

ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಹೊಸ ಕಾರಿನ ನಂಬರ್ ಪ್ಲೇಟ್ ಇನ್ನೂ ಬಂದಿಲ್ಲ. ಆದರೆ ನಂಬರ್ ಏನಿರಬಹುದು? ಎಲ್ಲರಿಗೂ ನಂಬರ್ ಹೇಳುವ ಆರ್ಯವರ್ಧನ್ ಕಾರಿನ ನಂಬರ್ ಕುತೂಹಲ ಜನರಲ್ಲಿ ಮನೆಮಾಡಿದೆ. ಕೆಲವು ಅಭಿಮಾನಿಗಳು, ಆರ್ಯವರ್ಧನ್ ರವರ ಹುಟ್ಟು ಹಬ್ಬ ಮತ್ತು ಬಿಗ್ ಬಾಸ್ ಪ್ರವೇಶಿದ ದಿನ ಸೇರಿದಂತೆ ಕೆಲ ದಿನಾಂಕಗಳನ್ನು ಕೂಡಿ ಹಾಕಿ ನಂಬರ್ ಅನ್ನು ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ದುಬಾರಿ ಕಾರಿನ ವಿಶೇಷತೆಗಳು ಏನು?

ರೇಂಜ್ ರೋವರ್ SV ಕಾರ್ಮೆಲ್ ಎಡಿಷನ್ ಒಂದು ಐಷಾರಾಮಿ ಮತ್ತು ಬಹಳ ಶಕ್ತಿಯನ್ನು ಹೊಂದಿರುವ ಕಾರು. ಈ ಕಾರಿನ ಡಿಸೈನ್ ಬಹಳ ಸುಂದರವಾಗಿದ್ದು, ಮಾಡ್ರನ್ ಕಾರು ಪ್ರೇಮಿಗಳಿಗೆ ಬಹಳ ಆಕರ್ಷಕವಾಗಿ ಕಾಣುತ್ತದೆ.

ಐಷಾರಾಮಿ ಇಂಟೀರಿಯರ್ ಡಿಸೈನ್ ನೊಂದಿಗೆ ಶಕ್ತಿಯುತ ಎಂಜಿನ್ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ, ಈ ಕಾರು ಇದು ಭಾರತೀಯ ರಸ್ತೆಗಳಲ್ಲಿ ಆಹ್ಲಾದಕರವಾದ ಚಾಲನಾ ಅನುಭವವನ್ನು ನೀಡುತ್ತದೆ.

ರೇಂಜ್ ರೋವರ್ SV ಕಾರ್ಮೆಲ್ ಆವೃತ್ತಿಯ ಕಾರಿನಲ್ಲಿ ಸುರಕ್ಷತೆಗೆ ಬಹಳ ಒತ್ತು ನೀಡಲಾಗಿದ್ದು, ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ, ಇದು ಚಾಲಕರು ಮತ್ತು ಅವರ ಪ್ರಯಾಣಿಕರಿಗೆ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ.

ಅಂದಹಾಗೆ, ಈ ಐಷಾರಾಮಿ ಕಾರಿನ ಬೆಲೆ ಭಾರತದಲ್ಲಿ 2.3 ಕೋಟಿ ರೂಪಾಯಿಯಿಂದ 2.6 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಇದೆ. ಆರ್ಯವರ್ಧನ್ ಗುರೂಜಿ ಅತ್ಯಾಕರ್ಷಕ ಬಳಿ ಬಣ್ಣದ ಕಾರನ್ನು ಖರೀಧಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ ಭಾರಿ ಬೇಡಿಕೆಯ ಕಾರಾಗಿ “ರೇಂಜ್ ರೋವರ್ SV ಕಾರ್ಮೆಲ್ ಎಡಿಷನ್” ಹೊರಹೊಮ್ಮಿದೆ.

Similar Posts

Leave a Reply

Your email address will not be published. Required fields are marked *