ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಹೀರೊ ಸುಬ್ಬು ಬಗ್ಗೆ ನಿಮಗೆಷ್ಟು ಗೊತ್ತು?

ಝೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಧಾರಾವಾಹಿಯ ಅಪ್ಪ ಮಗಳ ಕಥಾಹಂದರ ನೋಡುಗರ ಮನಸ್ಸನ್ನು ಸೆಳೆದಿಟ್ಟುಕೊಳ್ಳುವಲ್ಲಿ ಮೋಡಿ ಮಾಡಿದೆ. ಈ ಧಾರಾವಾಹಿಯಲ್ಲಿ ಅಪ್ಪನ ಪಾತ್ರವನ್ನು ಮೋಹನ್ ಶಂಕರ್, ನಾಯಕಿ ಪಾತ್ರವನ್ನು ಆಸಿಯಾ ಫಿರ್ದೋಸ್ ಹಾಗು ನಾಯಕನ ಪಾತ್ರವನ್ನು ಅಮೋಘ್ ಆದಿತ್ಯರವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಗೆ ಹಾಗು ಸುಬ್ಬು ರವರ ಜೋಡಿ ಬಹಳ ಮುದ್ದಾಗಿದೆ. ಮನೆ ಕೆಲಸದವನಾಗಿ, ರಾಜಕಾರಣಿಯ ಬಲಗೈ ಬಂಟನಾಗಿ ಹಾಗು ನಾಯಕಿಗೆ ಆಸರೆಯಾಗಿ ಸುಬ್ಬು ಪಾತ್ರಧಾರಿ ಅಂದರೆ ಅಮೋಘ್ ಆದಿತ್ಯ ರವರು ನೋಡುಗರ ಮನಸ್ಸನ್ನು ಗೆದ್ದಿದ್ದಾರೆ. ಆದರೆ, ಅಮೋಘ್ ಆದಿತ್ಯರ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಲೇಖನದಲ್ಲಿ ಸುಬ್ಬು ಪಾತ್ರಧಾರಿಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಮುಂದೆ ಓದಿರಿ…

Amogh Aditya
Image Credit: Instagram/_therealamogh_

ರಂಗಭೂಮಿಯಿಂದ ಕಲಾಬದುಕು ಆರಂಭ

ಮೂಲತಃ ಕುಂದಾಪುರದವರಾದ ಅಮೋಘ್ ರವರ ನಟನೆಯ ಬದುಕು ರಂಗಭೂಮಿಯಿಂದ ಶುರುವಾಗಿದ್ದು, ಆರಂಭದ ದಿನಗಳಲ್ಲಿ “ದೃಶ್ಯ” ಹಾಗು “ಸರ್ವಂ” ಎಂಬ ನಾಟಕ ತಂಡಗಳಲ್ಲಿ ಕೆಲಸ ಮಾಡಿದ್ದಾರೆ. 2020 ರಲ್ಲಿ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಬಹಳ ಸೌಂಡ್ ಮಾಡಿದ್ದ “ಸ್ವರ” ಎನ್ನುವ ಕಿರುಚಿತ್ರವು ಸೇರಿದಂತೆ ಹಲವು ಕಿರುಚಿತ್ರಗಳಲ್ಲಿ (ಶಾರ್ಟ್ ಫಿಲಂಸ್) ಅಮೋಘ್ ರವರು ನಟಿಸುವುದರ ಜೊತೆಗೆ ನಿರ್ದೇಶನ ತಂಡದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, 2021 ರಲ್ಲಿ ತೆರೆಗೆ ಬಂದ ಅನೀಶ್ ತೇಜೇಶ್ವರ್ ನಟನೆಯ ರಾಮಾರ್ಜುನ ಚಿತ್ರದಲ್ಲಿಯೂ ಕೂಡ ನಿರ್ದೇಶನ ತಂಡದಲ್ಲಿ ಹಾಗು ಸಂಭಾಷಣೆ ಬರವಣಿಗೆಯಲ್ಲಿ ಅಮೋಘ್ ಕೆಲಸ ಮಾಡಿರುವುದು ವಿಶೇಷವಾಗಿದೆ.

ಧಾರಾವಾಹಿಗಳ ಮೂಲಕ ಮನೆ ಮಾತಾದ ಅಮೋಘ್

ಅಮೋಘ್ ರವರ ಕಲಾ ಬದುಕು ಹೆಚ್ಚು ಪ್ರಸಿದ್ಧಿಗೆ ಬಂದಿದ್ದು ಧಾರಾವಾಹಿಗಳ ಮೂಲಕ ಎಂದರೆ ತಪ್ಪಾಗಲಾರದು. ಹೌದು, ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಈ ಹ್ಯಾಂಡ್ಸಮ್ ನಟ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನೈಜ ಘಟನೆ ಆಧಾರಿತ ಧಾರವಾಹಿ “ಶಾಂತಂ ಪಾಪಂ” ನ ಹಲವು ಸಂಚಿಕೆಗಳಲ್ಲಿ ಅಮೋಘ್ ಕಾಣಿಸಿಕೊಂಡಿದ್ದಾರೆ.

ನಂತರ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಂದ “ಹೂ ಮಳೆ” ಧಾರಾವಾಹಿಯಲ್ಲಿ ಮೊದಲ ಬಾರಿಗೆ ಪಾತ್ರ ಕಲಾವಿದನಾಗಿ ಅಮೋಘ್ ಅವಕಾಶ ಪಡೆದರು. ಹಾಗೆಯೇ, ಕಲರ್ಸ್ ಕನ್ನಡದಲ್ಲಿಯೇ ಪ್ರಸಾರವಾಗುತ್ತಿದ್ದ ದೊರೆಸಾನಿ, ಗೀತಾ, ಅಂತರಪಟ ಮತ್ತು ಝೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಸತ್ಯ ಧಾರಾವಾಹಿಯಲ್ಲಿಯೂ (ರಾಕಿ ಪಾತ್ರಧಾರಿಯಾಗಿ) ಅಮೋಘ್ ನಟಿಸಿ ಉತ್ತಮ ಕಲಾವಿದ ಎಂದು ಗುರುತಿಸಿಕೊಂಡರು.

Amogh Aditya
Image Credit: Instagram/_therealamogh_

ಶ್ರಾವಣಿ ಸುಬ್ರಮಣ್ಯದಲ್ಲಿ ಪೂರ್ಣ ಪ್ರಮಾಣದ ನಾಯಕ

ಹಲವು ವರ್ಷಗಳಿಂದ ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡ ಅಮೋಘ್ ರವರಿಗೆ 2024 ರಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಹೊಚ್ಚ ಹೊಸ ಧಾರವಾಹಿ ಶ್ರಾವಣಿ ಸುಬ್ರಮಣ್ಯ ದಿಂದ ದೊಡ್ಡ ಬ್ರೇಕ್ ಸಿಕ್ಕಿದೆ.

ಇಷ್ಟು ದಿನ ಧಾರಾವಾಹಿಗಳಲ್ಲಿ ಅತಿಥಿ ಕಲಾವಿದ ಹಾಗು ಸೈಡ್ ರೋಲ್ ಗಳಲ್ಲಿ ಅಭಿನಯಿಸುತ್ತಿದ್ದ ಅಮೋಘ್, ಶ್ರಾವಣಿ ಸುಬ್ರಮಣ್ಯದಲ್ಲಿ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ ಹಾಗು ಈ ಮೂಲಕ ತಾನೊಬ್ಬ ಉತ್ತಮ ಕಲಾವಿದ ಎಂದು ಅಮೋಘ್ ಸಾಬೀತು ಮಾಡಿದ್ದಾರೆ.

ನಾಯಕಿ ಶ್ರಾವಣಿ ಪಾತ್ರಧಾರಿಯಾದ ಆಸಿಯಾ ಫಿರ್ದೋಸ್ ಮತ್ತು ನಾಯಕ ಸುಬ್ಬು ಪಾತ್ರಧಾರಿಯಾದ ಅಮೋಘ್ ಆದಿತ್ಯರ ಮುದ್ದಾದ ಜೋಡಿ ತುಂಬಾ ಸದ್ದು ಮಾಡುತ್ತಿದೆ ಹಾಗು ಈ ಧಾರಾವಾಹಿಯನ್ನು ನೋಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಸಧ್ಯ ಸೀರಿಯಲ್ ಹಾಗು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿರುವ ಅಮೋಘ್, ಇನ್ನೂ ಹೆಚ್ಚಿನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸಲು ಉತ್ತಮ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.

Similar Posts

Leave a Reply

Your email address will not be published. Required fields are marked *