ಕಾಂತಾರ-1 ಚಿತ್ರಕ್ಕೆ ಖ್ಯಾತ ಮಲಯಾಳಂ ನಟ ಎಂಟ್ರಿ

“ಕಾಂತಾರ” ಚಾಪ್ಟರ್-1 ಸಿನಿಮಾ ರಿಷಬ್ ಶೆಟ್ಟಿ ನಿರ್ದೇಶನ ಹಾಗು ನಟನೆಯೊಂದಿಗೆ ಮೂಡಿಬರುತ್ತಿದ್ದು, ಸಿನಿಪ್ರಿಯರಲ್ಲಿ ಈ ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಹುಟ್ಟಿಸಿದೆ. ಈಗ ಸಿನಿಮಾ ಚಿತ್ರೀಕರಣ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ರಿಷಬ್ ತನ್ನ ಹುಟ್ಟೂರಿನಲ್ಲಿ ದೊಡ್ಡ ಸೆಟ್ ಹಾಕಿ ಕ್ಯಾಮರಾ ಮುಂದೆ ನಿಂತಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ತಂಡಕ್ಕೆ ಈಗ ಒಬ್ಬ ಮಲಯಾಳಂ ನಟನೂ ಸೇರಿದ್ದಾರೆ ಎಂದು ಹೇಳಲಾಗುತ್ತದೆ.

Famous Malayalam actor jayaram joined Kantara chapter-1

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ “ಕಾಂತಾರ” ಸಿನಿಮಾವು ಪ್ಯಾನ್ ಇಂಡಿಯಾಮಟ್ಟದಲ್ಲಿ ಹೆಚ್ಚು ಧ್ವನಿ ಮಾಡಿತ್ತು. ಬರೋಬ್ಬರಿ 300 ಕೋಟಿ ರೂಪಾಯಿಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು ಎಂದು ಹೇಳಲಾಗಿದೆ. ಹೊಂಬಾಳೆ ಫಿಲ್ಮ್ಸ್ ಅವರ ನಿರ್ಮಾಣದ ಈ ಚಿತ್ರಕ್ಕೆ ದಾಖಲೆ ಬಂದಿತ್ತು. ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆ ಆದ ಈ ಚಿತ್ರ ನಂತರ ಐದು ಭಾಷೆಗಳಿಗೆ ಡಬ್ ಆಗಿ ಭಾರಿ ಸೌಂಡ್ ಮಾಡಿತ್ತು.

“ಕಾಂತಾರ” ಸಕ್ಸಸ್ ಬಳಿಕ ಬೇರೆ ಸಿನಿಮಾಗಳನ್ನು ಪಕ್ಕಕ್ಕಿಟ್ಟ ರಿಷಬ್ ಶೆಟ್ಟಿ, ಕಾಂತಾರ ಪ್ರೀಕ್ವೆಲ್ ‘ಕಾಂತಾರ’-1 ಚಿತ್ರದ ಕಡೆ ಮಾತ್ರ ತಮ್ಮ ಕೆಲಸವನ್ನು ಕೇಂದ್ರೀಕರಿಸಿದ್ದಾರೆ. ಬೆಂಗಳೂರಿನ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ‘ಕಾಂತಾರ’-1 ಚಿತ್ರದ ಕೆಲಸಗಳನ್ನು ಶುರು ಮಾಡಿದ ರಿಷಬ್ ಶೆಟ್ಟಿ ಅದೇ ದಿನ ಸಣ್ಣ ಟೀಸರ್ ಒಂದನ್ನು ಬಿಟ್ಟು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದ್ದರು.

ಈ ಚಿತ್ರ ದೊಡ್ಡ ಬಜೆಟ್ ನಲ್ಲಿ ರೆಡಿಯಾಗುತ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ಗೆ ಚಿತ್ರವನ್ನು ರೆಡಿ ಮಾಡಬೇಕು ಎಂದು ರಿಷಬ್ ಹಾಗು ನಿರ್ಮಾಕರರಾದ ಹೊಂಬಾಳೆ ಫಿಲಂಸ್ ರವರು, 600ಕ್ಕೂ ಅಧಿಕ ಕಾರ್ಪೆಂಟರ್‌ಗಳು ಮತ್ತು ಸಹಾಯಕರ ಸಹಾಯದಿಂದ ದೊಡ್ಡ ಸೆಟ್ ನಿರ್ಮಾಣ ಮಾಡಿಸಿದ್ದಾರೆ.

ಕಾಂತಾರ ಪ್ರೀಕ್ವೆಲ್ಗೆ ಮಲಯಾಳಂ ನಟ ಜಯರಾಂ

Rishab Shetty, Shivaraj Kumar and Jayaram

ಸದ್ಯ ಕಾಂತಾರ-1 ತಂಡಕ್ಕೆ ಮಲಯಾಳಂ ನಟ ಜಯರಾಂ ಜಾಯಿನ್ ಆಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ನಟ ಜಯರಾಂ ರವರು ಮಲಯಾಳಂ ಸೇರಿದಂತೆ ಕನ್ನಡ, ತಮಿಳು ಹಾಗು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿ ಬಹಳ ಸದ್ದು ಮಾಡಿದ್ದ ಶಿವರಾಜ್‌ಕುಮಾರ್ ನಟನೆಯ ‘ಘೋಸ್ಟ್’ ಚಿತ್ರದಲ್ಲಿ ಎಸಿಪಿ ಚೆಂಗಪ್ಪ ಪಾತ್ರದಲ್ಲಿ ಜಯರಾಂ ಅಬ್ಬರಿಸಿದ್ದರು.

ಕಾಂತಾರ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ, ತದನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿತ್ತು. ಆದರೆ, ಈಗ ರೆಡಿಯಾಗುತ್ತಿರುವ ಕಾಂತಾರ-1 ಚಿತ್ರವನ್ನು ಒಂದೇ ಸಮಯದಲ್ಲಿ 5 ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಚಿತ್ರವು ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗು ಹಿಂದಿಯಲ್ಲಿ ಬಿಡುಯಾಗುತ್ತಿರುವುದರಿಂದ ಆಯಾ ಭಾಷೆಯ ಸಿನಿಪ್ರಿಯರಿಗೆ ಹತ್ತಿರವಾಗಲು ಅದೇ ಭಾಷೆಯ ಕೆಲವು ಕಲಾವಿದರನ್ನು ಚಿತ್ರತಂಡಕ್ಕೆ ಆಯ್ಕೆಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ದೊಡ್ಡ ಬಜೆಟ್ ನಲ್ಲಿ ಮೂಡಿಬರುತ್ತಿರುವ ಕಾಂತಾರ-1

ಕೇವಲ 20 ಕೋಟಿ ಬಜೆಟ್ ನಲ್ಲಿ ತಯಾರಾಗಿ 300 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದ ಕಾಂತಾರ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಬಹಳ ಸೌಂಡ್ ಮಾಡಿತ್ತು. ಈಗ ಕಾಂತಾರ ಪ್ರೀಕ್ವೆಲ್ ಚಿತ್ರಕ್ಕೆ ಸುಮಾರು 100 ಕೋಟಿ ಬಜೆಟ್ ಹಾಕಿ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರಬೇಕು ಎಂದು ನಿರ್ಮಾಪಕರು ಪಣತೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಓಟಿಟಿ ರೈಟ್ಸ್ ಈಗಾಗಲೇ ಮಾರಾಟವಾಗಿದ್ದು, ಅಮೇಜಾನ್ ಪ್ರೈಂ ಸಂಸ್ಥೆಯು ಬರೋಬ್ಬರಿ 120 ಕೋಟಿ ರೂ.ಗೆ ಚಿತ್ರದ ಡಿಜಿಟಲ್ ರೈಟ್ಸ್ ಪಡೆದುಕೊಂಡಿದೆ ಎನ್ನಲಾಗ್ತಿದೆ.

Similar Posts

Leave a Reply

Your email address will not be published. Required fields are marked *