IMCR Recruitment 2024: 44 ವಿವಿಧ ಹುದ್ದೆಗಳಿಗೆ ಆಹ್ವಾನ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಯು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ.

IMCR Recruitment 2024

ಸಧ್ಯ ಈ ಸಂಸ್ಥೆಯಲ್ಲಿ ಖಾಲಿ ಇರುವ 44 ಟೆಕ್ನಿಷನ್ ಮತ್ತು ಲ್ಯಾಬೊರೇಟರಿ ಅಟೆಂಡೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ವಿವರಗಳಾದ ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ವಿಧಾನ ಹಾಗು ಇನ್ನಿತರ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.

ಇಲಾಖೆ ಹೆಸರುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)
ಹುದ್ದೆಯ ಹೆಸರುವಿವಿಧ ಹುದ್ದೆಗಳು
ಖಾಲಿ ಇರುವ ಹುದ್ದೆಗಳು44
ಅರ್ಜಿ ಸಲ್ಲಿಕೆ ಪ್ರಾರಂಭ30 ಮೇ, 2024
ಅರ್ಜಿ ಸಲ್ಲಿಕೆ ಮುಕ್ತಾಯ16 ಜೂನ್, 2024
ಉದ್ಯೋಗ ಸ್ಥಳಭಾರತದಾದ್ಯಂತ
ಅಧಿಕೃತ ವೆಬ್ಸೈಟ್https://main.icmr.nic.in
ಹುದ್ದೆಗಳ ಹೆಸರು
ಟೆಕ್ನಿಕಲ್ ಅಸಿಸ್ಟೆಂಟ್ : 8
ಟೆಕ್ನಿಷನ್ : 14
ಲ್ಯಾಬೊರೇಟರಿ ಅಟೆಂಡೆಂಟ್ : 22

ಅರ್ಹತಾ ಮಾನದಂಡಗಳು

IMCR ಯಲ್ಲಿನ ನೇಮಕಾತಿಗೆ ಅರ್ಜಿಸಲ್ಲಿಸಲು ಅಭ್ಯರ್ಥಿಗಳಿಂದ ಈ ಕೆಳಕಂಡ ಅರ್ಹತಾ ಮಾನದಂಡಗಳು ಕೇಳಲಾಗಿದೆ.

  • ವಿದ್ಯಾರ್ಹತೆ: ಅಭ್ಯರ್ಥಿಯು ಪಿಯುಸಿ ಹಾಗು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ವಯೋಮಿತಿ: ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗು ಗರಿಷ್ಠ 30 ವರ್ಷದೊಳಗೆ ಇರಬೇಕು. ಸರ್ಕಾರದ ಆದೇಶ ಮೇರೆಗೆ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುವುದು.

ವೇತನ ಶ್ರೇಣಿ

ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಮಾಸಿಕ ವೇತನವನ್ನು ನೀಡಲಾಗುವುದು.

  • ಟೆಕ್ನಿಕಲ್ ಅಸಿಸ್ಟೆಂಟ್ : ರೂ. 35400 -112400
  • ಟೆಕ್ನಿಷಿಯನ್ : ರೂ.19900 – 63200
  • ಲ್ಯಾಬೊರೇಟರಿ ಅಟೆಂಡೆಂಟ್ : ರೂ.18000 – 56900

ಅರ್ಜಿ ಸಲ್ಲಿಸುವ ವಿಧಾನ

  • IMCR ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. www.nin.res.in.
  • ವೆಬ್‌ಸೈಟ್‌ನಲ್ಲಿ ಕಾಣುವ “ICMR-NIN ನೇಮಕಾತಿ-2024” ಲಿಂಕ್‌ ಮೇಲೆ ಕ್ಲಿಕ್ ಮಾಡಿ.
  • ನಂತರ “USER REGISTRATION” ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  • “USER REGISTRATION” ಪುಟದಲ್ಲಿ, ನೋಂದಣಿ ಫಾರ್ಮ್‌ನಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಿಖರವಾಗಿ ಮತ್ತು ಸಂಪೂರ್ಣವಾಗಿ ಭರ್ತಿ ಮಾಡಿ.
  • ನಂತರ ಅರ್ಜಿ ನಮೂನೆಯನ್ನು ಪ್ರವೇಶಿಸಲು “FORM FILL UP” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ, “SUBMIT” ಅಥವಾ “PAY NOW” ಬಟನ್ ಅನ್ನು ಕ್ಲಿಕ್ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿ.

ಅರ್ಜಿ ಶುಲ್ಕ

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 1200/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಹಾಗೆಯೇ, SC/ ST/ ಮಾಜಿ ಸೈನಿಕ ಮಹಿಳಾ ಅಭ್ಯರ್ಥಿಗಳು 1000/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಆಯ್ಕೆ ವಿಧಾನ

ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Similar Posts

Leave a Reply

Your email address will not be published. Required fields are marked *