NCB SI Recruitment 2024: ನಾರ್ಕೋಟಿಕ್ಸ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿ

ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಡೆಪ್ಯುಟೇಶನ್ ಆಧಾರದ ಮೇಲೆ 14 ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಗಾಗಿ ಅಧಿಕೃತವಾಗಿ ಜಾಹೀರಾತನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಅಪ್ಲೆ ಮಾಡಲು ಬಿಡುಗಡೆಯ ದಿನಾಂಕದಿಂದ 60 ದಿನಗಳ ಅವಕಾಶವನ್ನು ನೀಡಲಾಗಿದೆ.

NCB SI Recruitment 2024

ಈ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹತೆಯ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಆಫ್‌ಲೈನ್ ಮುಖಾಂತರ ಅರ್ಜಿಯನ್ನು ಪೋಸ್ಟ್ ಮೂಲಕ ಅಥವಾ ನೇರವಾಗಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ಹೆಸರು, ಆಯ್ಕೆಯ ವಿಧಾನ ಮತ್ತು ವೇತನ ಈ ಎಲ್ಲಾ ವಿವರಗಳನ್ನು ಓದಿಕೊಂಡು ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಇಲಾಖೆ ಹೆಸರುನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ
ಹುದ್ದೆಯ ಹೆಸರುಸಬ್ ಇನ್ಸ್ಪೆಕ್ಟರ್
ಖಾಲಿ ಇರುವ ಹುದ್ದೆಗಳು14
ಅರ್ಜಿ ಸಲ್ಲಿಕೆ ಪ್ರಾರಂಭ08 ಮಾರ್ಚ್, 2024
ಅರ್ಜಿ ಸಲ್ಲಿಕೆ ಮುಕ್ತಾಯ06 ಮೇ, 2024
ಅಧಿಕೃತ ವೆಬ್ಸೈಟ್narcoticsindia.nic.in

ಅರ್ಹತಾ ಮಾನದಂಡಗಳು

NCB ಯಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:

  • ವಿದ್ಯಾರ್ಹತೆ: ಅರ್ಜಿದಾರರು ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಅನುಭವ: ಆಸಕ್ತ ಅಭ್ಯರ್ಥಿಗಳು ನಿಯಂತ್ರಕ ಕಾನೂನು ಜಾರಿಯಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಶ್ರೇಣಿಯ ಸಮಾನತೆ: ಅಭ್ಯರ್ಥಿಗಳು ಸಮಾನ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ Level-5 ರಲ್ಲಿ ಕನಿಷ್ಠ 6 ವರ್ಷಗಳ ಸೇವೆಯನ್ನು ಹೊಂದಿರಬೇಕು.
  • ವಯೋಮಿತಿ: ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸುವ ಕೊನೆ ದಿನಾಂಕದಂದು ಅರ್ಜಿದಾರನ ವಯಸ್ಸಿನ ಮಿತಿಯು 56 ವರ್ಷಗಳನ್ನು ಮೀರಬಾರದು.
  • ಹೆಚ್ಚಿನ ಅನುಭವ (ಕಡ್ಡಾಯವಲ್ಲ): ಅಭ್ಯರ್ಥಿಗಳು ಅಪರಾಧ ಅಥವಾ ಆರ್ಥಿಕ ಅಪರಾಧಗಳ ತನಿಖೆಯಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿದ್ದರೆ ಉತ್ತಮ.

ವೇತನ ಶ್ರೇಣಿ

ಡೆಪ್ಯುಟೇಶನ್ ಆಧಾರದ ಮೇಲೆ ಗೃಹ ಸಚಿವಾಲಯದ ಅಡಿಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳಾಗಿ ಆಯ್ಕೆಯಾಗುವ ಅಭ್ಯರ್ಥಿಗಳು ಮಾಸಿಕ ವೇತನ ₹9,300 ರಿಂದ ₹38,400 ರ ಜೊತೆಗೆ ₹42,000 ಗ್ರೇಡ್ ಪೇ ಯನ್ನು ಪಡೆಯುತ್ತಾರೆ.

ಅರ್ಜಿ ಸಲ್ಲಿಸುವ ವಿಧಾನ

ಡೆಪ್ಯುಟೇಶನ್ ಆಧಾರದ ಮೇಲೆ NCB ಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು, ನೀವು ಕೆಳಗೆ ನೀಡಿರುವ ಸೂಚನೆಗಳನ್ನು ಅನುಸರಿಸಿ.

  • ನೇಮಕಾತಿಯ ಅಧಿಕೃತ ನೋಟಿಫಿಕೇಶನ್ ಅನ್ನು ಸಂಪ್ಪೂರ್ಣವಾಗಿ ಓದಿಕೊಳ್ಳಿ.
  • ಅರ್ಜಿಯನ್ನು ನಮೂನೆಯನ್ನು ಸರಿಯಾದ ಮಾಹಿತಿಗಳೊಂದಿಗೆ ಭರ್ತಿ ಮಾಡಿರಿ.
  • ಅರ್ಜಿಯ ಜೊತೆಗೆ ಕೇಳಿರುವ ಅಗತ್ಯ ದಾಖಲೆಗಳನ್ನು ಜೊತೆ ಮಾಡಿ.
  • ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಸರಿಯಾಗಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಅರ್ಜಿ ಮತ್ತು ದಾಖಲೆಗಳನ್ನು ಒಳಗೊಂಡ ಲಕೋಟೆಯನ್ನು ಡೆಪ್ಯೂಟಿ ಡೈರೆಕ್ಟರ್ (ಆಡಳಿತ), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ನವದೆಹಲಿ ಇವರಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಿ.

ಅರ್ಜಿ ಸಲ್ಲಿಸುವ ವಿಳಾಸ: ಉಪ ನಿರ್ದೇಶಕರು (ಆಡಳಿತ), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, 2ನೇ ಮಹಡಿ, ಆಗಸ್ಟ್ ಕ್ರಾಂತಿ ಭವನ, ಭಿಕಾಜಿ ಕಾಮಾ ಪ್ಲೇಸ್, ನವದೆಹಲಿ-110066.

Similar Posts

Leave a Reply

Your email address will not be published. Required fields are marked *