ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುವ ಬಗ್ಗೆ ಮಾತನಾಡಿದ ರಾಧಿಕಾ ಪಂಡಿತ್

ಸ್ಯಾಂಡಲ್‌ವುಡ್ ಪ್ರಿನ್ಸೆಸ್ ಎಂದು ಪ್ರೀತಿಯಿಂದ ಕರೆಯಲಾಗುವ ಜನಪ್ರಿಯ ನಟಿ ರಾಧಿಕಾ ಪಂಡಿತ್ ತಮ್ಮ ನಟನಾ ವೃತ್ತಿಜೀವನದಿಂದ ವಿರಾಮ ತೆಗೆದುಕೊಂಡು ಬಹಳ ದಿನಗಳಾಗಿವೆ. ಕನ್ನಡ ಚಿತ್ರರಂಗದಲ್ಲಿ ಗಮನಾರ್ಹ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ರಾಧಿಕಾ ತಮ್ಮ ಪ್ರತಿಭೆ ಮತ್ತು ಮೋಡಿಯಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಯಶ್ ಅವರನ್ನು ಮದುವೆಯಾಗಿ ತಮ್ಮ ಸಂಸಾರ ಹಾಗು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದರು.

Radhika Pandit spoke about her re-entry into the film industry
Image Credit: Instagram/ Radhika Pandit

ರಾಧಿಕಾ ಬೆಳ್ಳಿತೆರೆಗೆ ಮರಳುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ, ಮತ್ತೊಮ್ಮೆ ಅವರ ಮನಮೋಹಕ ಅಭಿನಯವನ್ನು ವೀಕ್ಷಿಸಲು ಆಶಿಸುತ್ತಿದ್ದಾರೆ. ಇತ್ತೀಚೆಗೆ, ರಾಧಿಕಾ ಪಂಡಿತ್ ತಮ್ಮ ಫಾಲೋವರ್ಸ್ಗಳೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮೂಲಕ, ಅವರ ಪ್ರಸ್ತುತ ಜೀವನ ಮತ್ತು ಭವಿಷ್ಯದ ಯೋಜನೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಆಸ್ಕ್ ಮೀ ಎನಿಥಿಂಗ್ ಸಂವಾದದಲ್ಲಿ, ಅಭಿಮಾನಿಯೊಬ್ಬರು ನೀವು ನಟನೆಗೆ ಯಾವಾಗ ಮರಳುತ್ತೀರಿ ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಧಿಕಾ, ಸಮಯ ಬಂದಾಗ ಮತ್ತೆ ನಟನೆಗೆ ಹಿಂದುರುಗುತ್ತೇನೆ ಎಂದು ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಹೇಳಿಕೆ, ಶೀಘ್ರದಲ್ಲೇ ತಮ್ಮ ಪ್ರೀತಿಯ ನಟಿ ಮತ್ತೊಮ್ಮೆ ದೊಡ್ಡ ಪರದೆ ಮರಳುವುದನ್ನು ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ಕೊಟ್ಟಿದೆ.

ರಾಧಿಕಾ ತನ್ನ ನಟನಾ ವೃತ್ತಿಜೀವನವನ್ನು ತಿಳಿಸುವುದರ ಜೊತೆಗೆ, ತನ್ನ ಫಾಲೋವರ್ಸ್ ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಆಕೆಯ ಮಕ್ಕಳಾದ ಐರಾ ಮತ್ತು ಯಥರ್ವ್ ಮತ್ತು ಅವರ ಬಗ್ಗೆ ಕೇಳಿದಾಗ, ಅವರು ಆರೋಗ್ಯವಾಗಿ ಮತ್ತು ತಮ್ಮದೇ ಆದ ವಿಶಿಷ್ಟ ಸ್ವಭಾವದೊಂದಿಗೆ ಬೆಳೆಯುತ್ತಿದ್ದಾರೆ ಎಂದು ರಾಧಿಕಾ ಹೇಳಿದರು. ನಮ್ಮ ಮಕ್ಕಳ ಬೆಳವಣಿಗೆ ನನಗೆ ಹಾಗು ಯಶ್ ಗೆ ಹೆಮ್ಮೆಯನ್ನು ತಂದಿದೆ ಎಂದರು.

ಅಭಿಮಾನಿಯೊಬ್ಬರು ರಾಧಿಕಾ ಅವರ ಕೈ ಬೆರಳಿನಲ್ಲಿ ಬಿಳಿ ಚಿನ್ನದ ಉಂಗುರವನ್ನು ನೋಡಿ ಅದರ ಬಗ್ಗೆ ಕೇಳಿದರು. ಇದು ನನ್ನ ಮೊದಲ ಸಂಬಳದಲ್ಲಿ ಖರೀಧಿಸಿದ್ದು, ಇದು ನನ್ನ ಜೀವನದಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿದೆ ಎಂದು ರಾಧಿಕಾ ಹೇಳಿದರು.

ಇದನ್ನೂ ಓದಿರಿ: ಕಿರುತೆರೆ ಶೋಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ: ತಾಯಿಯಾದ ಬಳಿಕ ಮತ್ತೆ ವೃತ್ತಿ ಆರಂಭ

ನಟಿಯ ಅಡುಗೆಮನೆಯ ಕೌಶಲ್ಯದ ಬಗ್ಗೆ ಪ್ರಶ್ನಿಸಿದಾಗ, ರಾಧಿಕಾ ಸಾರಸ್ವತ್ ಮತ್ತು ಗೋವಾ ಶೈಲಿಯ ಆಹಾರಗಳ ಮೇಲಿನ ಪ್ರೀತಿಯನ್ನು ಹಂಚಿಕೊಂಡರು. ಅವರು ತಮ್ಮ ಮಕ್ಕಳಿಗೆ ವಿವಿಧ ಭಕ್ಷ್ಯಗಳನ್ನು ಮಾಡಿಕೊಡುತ್ತೇನೆ, ವಿಶೇಷವಾಗಿ ಐರಾಗೆ ನಾನು ಬೇಕಿಂಗ್ ಮಾಡುವ ಎಲ್ಲಾ ಅಡುಗೆಗಳು ಮತ್ತು ಖಾದ್ಯಗಳು ಬಹಳ ಇಷ್ಟವಾಗುತ್ತದೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು. ಹೀಗೆ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿದ ಸ್ಯಾಂಡಲ್ವುಡ್ ಪ್ರಿನ್ಸೆಸ್, ತಮ್ಮ ಅಭಿಮಾನಿಗಳೊಂದಿಗೆ ಸ್ವಲ್ಪ ಸಮಯ ಹಂಚಿಕೊಂಡು ಖುಷಿ ಪಟ್ಟರು.

ಒಟ್ಟಿನಲ್ಲಿ, ತಮ್ಮ ಕುಟುಂಬ ಹಾಗು ಮಕ್ಕಳ ಬೆಳವಣಿಗೆಯ ಜವಾಬ್ದಾರಿಯನ್ನು ನಿಭಾಯಿಸಲು ಚಿತ್ರರಂಗದಿಂದ ದೂರ ಉಳಿದಿರುವ ಸ್ಯಾಂಡಲ್‌ವುಡ್ ಪ್ರಿನ್ಸೆಸ್, ಭವಿಷ್ಯದಲ್ಲಿ ಅವರ ನಟನಾ ಪ್ರತಿಭೆಯನ್ನು ಮತ್ತೆ ತೆರೆಯ ಮೇಲೆ ತೋರುವ ಸೂಚನೆಯನ್ನು ನೀಡಿದ್ದಾರೆ ಹಾಗು ಇದು ಅವರ ಅಭಿಮಾನಿಗಳಲ್ಲಿ ಕಾತುರತೆಯನ್ನು ಹೆಚ್ಚಿಸಿದೆ.

Similar Posts

Leave a Reply

Your email address will not be published. Required fields are marked *