Seetha Raama: ಮಧ್ಯರಾತ್ರಿ ಸೀತಾಳ ಬರ್ತ್ಡೇ ಆಚರಿಸಿದ ರಾಮ್ ಮತ್ತು ಸಿಹಿ

ಸೀತಾಳನ್ನು ತಾತ ತಮ್ಮ ಮನೆಗೆ ಸೊಸೆಯಾಗಿ ಒಪ್ಪಿಕೊಂಡ ಮೇಲೆ ಶ್ರೀ ರಾಮ್ ದೇಸಾಯಿ ಬದುಕಲ್ಲಿ ಖುಷಿಯ ಕ್ಷಣಗಳು ಮನೆ ಮಾಡಿವೆ. ಇನ್ನೇನು ಕೆಲವೇ ದಿನಗಳಲ್ಲಿ ಸೀತಾ ಹಾಗು ರಾಮ್ ರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಲಿದೆ. ಅದಕ್ಕೂ ಮೊದಲು ಸೀತಾಳ ಹುಟ್ಟುಹಬ್ಬ ಬಂದಿರುವ ಕಾರಣ, ಅವಳ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸಬೇಕು ಎಂದು ರಾಮ್ ಪ್ಲಾನ್ ಮಾಡಿಕೊಂಡಿದ್ದ. ಆದರೆ, ಸೀತಾಳಿಗೆ ಹುಟ್ಟುಹಬ್ಬವನ್ನು ಆಚರಿಸ್ಕೊಳ್ಳುವುದು ಇಷ್ಟವಿಲ್ಲ ಎಂದು ತಿಳಿದ ಮೇಲೆ ರಾಮ್ ಮತ್ತು ಸಿಹಿ ಒಟ್ಟಿಗೆ ಸೇರಿ ಸೀತಾಳಿಗೆ ಸರ್ಪ್ರೈಸ್ ಆಗಿ ಬರ್ತ್ಡೇ ಸೆಲೆಬ್ರೇಶನ್ ಮಾಡಬೇಕು ಎಂದು ಪ್ಲಾನ್ ಮಾಡಿಕೊಳ್ಳುತ್ತಾರೆ.

Seetha Birthday Celebration
Image Credit: ZEE5

ಹುಟ್ಟುಹಬ್ಬ ಆಚರಿಸಲು ಶಾರದಮ್ಮನ ವಠಾರಕ್ಕೆ ಬಂದ ರಾಮ್

ರಾಮ್ ಮತ್ತು ಸಿಹಿಯ ಪ್ಲಾನ್ ಪ್ರಕಾರ ಮಧ್ಯರಾತ್ರಿ ಸರಿಯಾಗಿ ೧೨ ಗಂಟೆಗೆ ಸೀತಾಳಿಗೆ ಬರ್ತ್ಡೇ ಸೆಲೆಬ್ರೆಷನ್ ಕೊಡಬೇಕು ಎಂದು ಕೊಂಡಿರುತ್ತಾರೆ. ಹಾಗಾಗಿ, ರಾಮ್ ತಾನೇ ತಯಾರಿಸಿದ ಒಂದು ಸಣ್ಣ ಕಪ್ ಕೇಕ್ ಅನ್ನು ತೆಗೆದುಕೊಂಡು ರಾತ್ರಿ ೧೨ ಕ್ಕೆ ಸೀತಾಳ ಮನೆ ಹತ್ತಿರ ಬಂದು ಸೀತಾಗೆ ಕಾಲ್ ಮಾಡಿ ಗಾಬರಿಯಾದವಂತೆ ಬೇಗ ಮನೆಯಿಂದ ಆಚೆ ಬನ್ನಿ ಎಂದು ಹೇಳುತ್ತಾನೆ. ರಾತ್ರಿ ಸಮಯದಲ್ಲಿ ಇಷ್ಟೊಂದು ಗಾಬರಿಯಿಂದ ರಾಮ್ ಮಾತನಾಡಿದ್ದನ್ನು ಕೇಳಿದ ಸೀತಾ ಮನೆಯಿಂದ ಹೊರಗೆ ಬರುತ್ತಾಳೆ ಹಾಗು ಅವಳ ಜೊತೆ ಸಿಹಿಯು ಹೊರಬರುತ್ತಾಳೆ.

ರಾಮ್ ಕೊಟ್ಟ ಗಿಫ್ಟ್ ಅನ್ನು ಬೇಡ ಎಂದ ಸೀತಾ

ಸೀತಾ ಹೊರಬಂದ ತಕ್ಷಣ ರಾಮ್ ಹಾಗು ಸಿಹಿ ಪ್ಲಾನ್ ಪ್ರಕಾರ ತಾನೇ ತಯಾರಿಸಿದ ಕಪ್ ಕೇಕ್ ಅನ್ನು ಸೀತಾಗೆ ತೋರಿಸಿ “ಹ್ಯಾಪಿ ಬರ್ತ್ಡೇ ಸೀತಾ” ಎಂದು ರಾಮ್ ವಿಶ್ ಮಾಡುತ್ತಾನೆ. ನಂತರ ಕೇಕ್ ಮಾಡಿಸಿ ಮೂವರು ಕೇಕ್ ಅನ್ನು ಒಬ್ಬರಿಗೊಬ್ಬರು ತಿನ್ನಿಸುತ್ತಾರೆ. ಇದಾದ ಮೇಲೆ, ಕಾರುಗಳ ಬುಕ್ಲೆಟ್ ತೋರಿಸಿ ಇದರಲ್ಲಿ ನಿಮಗೆ ಯಾವ ಕಾರು ಇಷ್ಟ ಆಯಿತು ಹೇಳಿ ಅದೇ ಕಾರನ್ನು ನಿಮ್ಮ ಬರ್ತ್ಡೇ ಗಿಫ್ಟ್ ಆಗಿ ಕೊಡ್ತಿನಿ ಎಂದು ಹೇಳುತ್ತಾನೆ. ಆದರೆ, ಸ್ವಾಭಿಮಾನಿಯಾದ ಹಾಗು ಇಂತಹ ಗಿಫ್ಟ್ಗಳಿಗೆ ಆಸೆ ಪಡದ ಸೀತಾ ಯಾವ ಕಾರ್ ಬೇಡ ನನಗೆ ನೀವು ಕೊಟ್ಟ ಕಪ್ ಕೇಕ್ ಅಷ್ಟೇ ಸಾಕು ಅದೇ ನನಿಗೆ ದೊಡ್ಡ ಗಿಫ್ಟ್ ಎಂದು ಹೇಳುತ್ತಾಳೆ. ಇಷ್ಟು ಹೇಳಿ ಮೂವರು ಒಂದು ಬರ್ತ್ಡೇ ಫೋಟೋ ತೆಗೆದುಕೊಳ್ಳುತ್ತಾರೆ.

ಭಾರ್ಗವಿಗೆ ಹೆದರಿಸಿದ ಸತ್ಯ

Sathya and Bhargavi
Image Credit: ZEE5

ರಾಮ್ ಹಾಗು ಸೀತಾಳ ನಿಶ್ಚಿತಾರ್ಥದ ಸಲುವಾಗಿ, ವಾಣಿಯ (ರಾಮ್ ತಾಯಿ) ಒಡವೆಗಳನ್ನು ಸೀತಾಗೆ ನೀಡಲು ಸೂರ್ಯ ಪ್ರಕಾಶ್ ದೇಸಾಯಿ ಭಾರ್ಗವಿಗೆ ಹೇಳಿದಾಗ, ಭಾರ್ಗವಿ ಮನಸ್ಸಿನಲ್ಲೇ ಕೋಪಗೊಂಡಿರುತ್ತಾಳೆ. ಆ ಸಮಯದಲ್ಲಿ ಅಲ್ಲೇ ಇದ್ದ ಸತ್ಯ ಇದನ್ನು ಗಮನಿಸಿ ಮನಸ್ಸಿನಲ್ಲಿ ಖುಷಿ ಪಟ್ಟಿರುತ್ತಾನೆ. ಈ ಘಟನೆ ನಡೆದ ಸ್ವಲ್ಪ ಹೊತ್ತಿನ ನಂತರ, ಭಾರ್ಗವಿ ಮನೆಯ ಹೊರಗಡೆ ಲಾನ್ ನಲ್ಲಿ ಕುಳಿತುಕೊಂಡು ಮೊಬೈಲ್ ಅನ್ನು ನೋಡುತ್ತಿರುವಾಗ ಅಲ್ಲಿಗೆ ಬಂದ ಸತ್ಯ “ಇವತ್ತು ನಾನು ಕುಡಿದಿಲ್ಲ ಮತ್ತೆ ಇವತ್ತು ನಿಂಗೆ ಒಂದು ನಿಜ ಹೇಳ್ಬೇಕು” ಭಾರ್ಗವಿಗೆ ಹೆದರಿಸಲು ಮುಂದಾಗುತ್ತಾನೆ.

ಇದನ್ನೂ ಓದಿರಿ: Shravani Subramanya: ಶ್ರಾವಣಿ ಎಕ್ಸಾಮ್ ಫೇಲ್ ಆಗಲು ಪ್ಲಾನ್ ಮಾಡಿದ ವಿಜಯಾಂಬಿಕೆ

ಸತ್ಯ ಕುಡಿದ ಕಷಾಯದಲ್ಲಿ ಎಣ್ಣೆ ಹಾಕಿದ ಭಾರ್ಗವಿ

“ಅಪ್ಪ ಹೇಳಿದ ಪ್ರಕಾರ ನೀನು ಕದ್ದಿರೋ ವಾಣಿ ಅತ್ತಿಗೆಯ ಒಡವೆಗಳನ್ನು ಸೀತಾಗೆ ಕೊಟ್ಟುಬಿಡು, ಇನ್ಮೇಲಿಂದ ಅದು ಸೀತಾಗೆ ಸೇರಬೇಕು. ಬರೀ ಒಡವೆಗಳು ಮಾತ್ರವಲ್ಲ ಈ ಮೆನೆಯ ಸಂಪೂರ್ಣ ಜವಾಬ್ದಾರಿ ಇನ್ಮೇಲಿಂದ ಸೀತಾಗೆ ಸೇರಬೇಕು, ನಿನಿಗೆ ಏನೂ ಸಿಗಲ್ಲ.” ಎಂದು ಸತ್ಯ ಭಾರ್ಗವಿಗೆ ಹೇಳುತ್ತಾನೆ. ಇದನ್ನು ಕೇಳಿ ಭಾರ್ಗವಿಗೆ ಸಿಟ್ಟು ಬಂದು ಇಲ್ಲಿಂದ ಸುಮ್ನೆ ಹೋಗು ಇಲ್ಲ ಅಂದ್ರೆ ಪರಿಣಾಮ ಚೆನ್ನಾಗಿ ಇರಲ್ಲ ಎನ್ನುತ್ತಾಳೆ. ಸ್ವಲ್ಪ ಹೊತ್ತಿನ ಬಳಿಕ ಕಷಾಯದಲ್ಲಿ ಕುಡಿಯುವ ಎಣ್ಣೆಯನ್ನು ಮಿಕ್ಸ್ ಮಾಡಿ ಗೊತ್ತಾಗದ ಹಾಗೆ ಸಾಧನ ಮುಖಾಂತರ ಸತ್ಯಗೆ ನೀಡುವ ಭಾರ್ಗವಿ ಸತ್ಯಗೆ ಮತ್ತೆ ಕುಡಿಯುವಂತೆ ಮಾಡಿಬಿಡುತ್ತಾಳೆ.


Similar Posts

Leave a Reply

Your email address will not be published. Required fields are marked *