ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದ ರುದ್ರಪ್ರತಾಪ ಅಂಜಲಿಗೆ ಹೇಳದೆ ಕೇಳದೆ ಭಾರ್ಗವಿಯ ಸೂಚನೆ ಮೇರೆಗೆ ಚರಣ್ ಡಿ. ಮನೆಯಲ್ಲಿ ಉಳಿದುಕೊಳ್ಳಲು ಹೋಗಿರುತ್ತಾನೆ. ಈ ವಿಷಯ ತಿಳಿಯದ ಅಂಜಲಿ ರಾಮು (ರುದ್ರಪ್ರತಾಪ ಎಂದು ಅಂಜಲಿಗೆ ತಿಳಿದಿರುವುದಿಲ್ಲ) ಅನ್ನು ಹುಡುಕಿಕೊಂಡು ಆತ ಎಲ್ಲಿಗೆ ಹೋಗಿರಬಹುದು ಎಂದು ಯೋಚಿಸುತ್ತ ಆತನ ಫೋನ್ ಗೆ ಕಾಲ್ ಮಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ. ಆದರೆ, ಮೋಸಗಾರ ರುದ್ರಪ್ರತಾಪ ಅದೇ ರಸ್ತೆಯಲ್ಲಿ ನಿಂತು ಅಂಜಲಿಗಾಗಿಯೇ ಕಾಯುತ್ತಿರುತ್ತಾನೆ.

ಅಂಜಲಿಯನ್ನು ಕೂಗಿದ ರುದ್ರಪ್ರತಾಪ ಹೇಳುತ್ತಾನೆ, ಅಂಜಲಿ ಯವರೇ ನನ್ನನ್ನ ಹುಡುಕಿಕೊಂಡು ಹೋಗ್ತಾ ಇದ್ದೀರಾ.” ಈ ಮಾತನ್ನು ಕೇಳಿ ಹಿಂದೆ ತಿರುಗಿದ ಅಂಜಲಿಗೆ ರಾಮು ಕಾಣಿಸಿಕೊಳ್ಳುತ್ತಾನೆ ಅವನನ್ನು ನೋಡಿದ ತಕ್ಷಣ ಓಡಿಬಂದು ರಾಮುವನ್ನು ತಬ್ಬಿಕೊಂಡು ಹೇಳದೆ ಕೇಳದೆ ಎಲ್ಲಿಗೆ ಹೋಗಿದ್ರಿ ರಾಮು ಅವರೇ ಎಂದು ಹೇಳುತ್ತಾಳೆ.

ಅಂಜಲಿಗೆ ಐ ಲವ್ ಯು ಎಂದ ರುದ್ರಪ್ರತಾಪ

Rudra Pratap proposes to anjali
Image Credit: ZEE5

ಅಂಜಲಿ ತಬ್ಬಿಕೊಂಡ ತಕ್ಷಣ ರಾಮುಗೆ ಖುಷಿಯೋ ಖುಷಿ, ತನ್ನ ಮೋಸದ ಲವ್ ಗೆ ಒಳ್ಳೆ ಗ್ರೀನ್ ಸಿಗ್ನಲ್ ಸಿಕ್ಕಿತು ಎಂದು ಮನಸ್ಸಿನಲ್ಲೇ ಖುಷಿ ಪಡುತ್ತಾನೆ. ಇದೆ ಒಳ್ಳೆಯ ಸಮಯ ಎಂದು ತನ್ನ ಮೋಸದ ಪ್ರೀತಿಯ ಬಲೆಯನ್ನು ಅಂಜಲಿಗೆ ಬೀಸಲು ಮುಂದಾಗುತ್ತಾನೆ. ಅಂಜಲಿಗೆ ಐ ಲವ್ ಯು ಅಂಜು ಎಂದು ಹೇಳಿಯೇ ಬಿಡುತ್ತಾನೆ. ಆದರೆ ಈ ಮೋಸದ ಪ್ರೀತಿಯನ್ನು ತಿಳಿಯದ ಅಂಜಲಿ ರಾಮು ಪ್ರೀತಿಯನ್ನು ಒಪ್ಪಿಕೊಂಡು ಬಿಡುತ್ತಾಳೆ.

ರುದ್ರಪ್ರತಾಪ ನೋಡಲು ನನ್ನ ಹಾಗೆ ಇದ್ದಾನೆ ಎಂದ ರಾಮು

Rudra Pratap and anjali talking
Image Credit: ZEE5

ಮೋಸಗಾರ ರುದ್ರಪ್ರತಾಪ ತಾನು ಏಕೆ ಆಸ್ಪತ್ರೆಯಿಂದ ಬಂದುಬಿಟ್ಟೆ ಎಂದು ಕಾರಣವಾಗಿ ಅಂಜಲಿಗೆ ಹೀಗೆ ಹೇಳುತ್ತಾನೆ, ” ಅಂಜಲಿಯವರೇ ನಿಮಗೆ RP ಗೊತ್ತಾ? ಅದೇ ರುದ್ರಪ್ರತಾಪ ಅವನನ್ನು ಪೊಲೀಸರು ಹುಡುಕುತ್ತಿದ್ದಾರೆ ಆದರೆ ರುದ್ರಪ್ರತಾಪ ನೋಡಲು ನನ್ನ ಹಾಗೆಯೇ ಇದ್ದಾನಂತೆ ಅದಕ್ಕೆ ನನ್ನನ್ನೇ ರುದ್ರಪ್ರತಾಪ ಎಂದು ಪೊಲೀಸರು ಅರೆಸ್ಟ್ ಮಾಡಿಬಿಡುತ್ತಾರೆ ಎಂದು ಹೆದರಿ ಆಸ್ಪತ್ರೆಯಿಂದ ಹೊರ ಬಂದು ನನ್ನ ಫ್ರೆಂಡ್ ಮನೆಯಲ್ಲಿ ಉಳಿದುಕೊಂಡಿದ್ದೇನೆ ನನ್ನ ಮೊಬೈಲ್ ನಂಬರ್ ಕೂಡ ಚೇಂಜ್ ಮಾಡಿಕೊಂಡಿದ್ದೇನೆ.” ಈ ಮಾತುಗಳನ್ನು ಅಂಜಲಿ ನಂಬಿ ಬಿಡುತ್ತಾಳೆ.

ಇದನ್ನೂ ಓದಿರಿ: ಕೊನೆಗೂ ಅಪ್ಪನ ಜೊತೆ ಸೆಲ್ಫಿ ತೆಗೆದುಕೊಂಡ ಶ್ರಾವಣಿ – Shravani Subramanya

ರಾಮ್ ಚಿಕ್ಕಪ್ಪನನ್ನು ಇಂಪ್ರೆಸ್ ಮಾಡಿದ ಸೀತಾ ಮತ್ತು ಸಿಹಿ

ರಾಮ್ ಮನೆಯಲ್ಲಿ ಅವರ ಅಪ್ಪ ಅಮ್ಮನ ನ ವಿಶೇಷ ಪೂಜೆ ನಡೆಯುತ್ತಿದೆ. ಪೂಜೆಗೆ ಸೀತಾ, ಸಿಹಿ, ಸೀತಾ ಅಣ್ಣ ಹಾಗು ಅತ್ತಿಗೆ, ಅಶೋಕ್ ಹೆಂಡ್ತಿ ಪ್ರಿಯ ಹಾಗು ಅವರ ಅಮ್ಮ ಎಲ್ಲರೂ ಬಂದಿದ್ದಾರೆ. ಆದರೆ, ರಾಮ್ ಬಿಸಿನೆಸ್ ವಿಚಾರವಾಗಿ ಅರ್ಜೆಂಟ್ ಆಗಿ ದುಬೈ ಗೆ ಹೋಗಬೇಕು ಎಂದು ಹೇಳಿ ಹೊರಟು ಹೋಗುತ್ತಾನೆ.

Ram's uncle, Sihi and Seetha conversation - Seetha Raama Serial
Image Credit: ZEE5

ಮನೆಯಲ್ಲಿ ಪೂಜೆ ಮುಗಿದ ಮೇಲೆ ಪ್ರಸಾದವನ್ನು ತೆಗೆದುಕೊಂಡ ಸಿಹಿ ಅದನ್ನು ರಾಮ್ ಚಿಕ್ಕಪ್ಪನಿಗೆ ಕೊಡಲು ಮಹಡಿ ಮೇಲೆ ಹುಡುಕಿಕೊಂಡು ಹೋಗುತ್ತಾಳೆ. ಮಹಡಿ ಮೇಲೆ ಸತ್ಯ ಅಂದ್ರೆ ರಾಮ್ ಚಿಕ್ಕಪ್ಪ ಕುಡಿದು ಮಲಗಿರುತ್ತಾನೆ. ಅವನ್ನನು ಎಚ್ಚರಿಸಿದ ಸಿಹಿ ಪ್ರಸಾದ ತೆಗೆದುಕೊಳ್ಳಿ ಎಂದು ಹೇಳುತ್ತಾಳೆ. ಸಿಹಿಯನ್ನು ಕಂಡ ಸತ್ಯ ಬಹಳ ಖುಷಿಯಾಗುತ್ತಾನೆ ಹಾಗು ಈ ಪ್ರಸಾದವನ್ನು ನೀನೆ ತಿನ್ನು ಪುಟ ನಾನು ಆಮೇಲೆ ಕೆಳಗಡೆ ಹೋಗಿ ತಿನ್ನುತ್ತೀನಿ ಎಂದು ಹೇಳುತ್ತಾನೆ.

ಸಿಹಿ ಮಾತನ್ನು ಮುಂದುವರೆಸಿ ಹೇಳುತ್ತಾಳೆ, “ನನಗೆ ಸಕ್ಕರೆ ಖಾಯಿಲೆ ಇದೆ ಅದಕ್ಕೆ ನಾನು ಸ್ವಲ್ಪ ಸ್ವೀಟ್ ಮಾತ್ರ ತಿನ್ನೋದು ಎನ್ನುತ್ತಾಳೆ. ಈ ಮಾತನ್ನು ಕೇಳಿ ಸತ್ಯನಿಗೆ ಶಾಕ್ ಆಗುತ್ತದೆ. ದೇವರು ಎಷ್ಟೊಂದು ಕ್ರೂರಿ, ಇಷ್ಟು ಚಿಕ್ಕ ವಯಸ್ಸಿನ ಮಗುಗೆ ಸಕ್ಕರೆ ಖಾಯಿಲೆನ ಕೊಟ್ಟಿದಿಯಲ್ಲ ನೀನು ದೇವರಲ್ಲ ಕಲ್ಲು ಎಂದು ಶಾಪ ಹಾಕುತ್ತಾನೆ. ನಂತರ ಸಿಹಿಯ ಎರಡು ಕೈಗಳನ್ನು ತನ್ನ ಕಣ್ಣಿಗೆ ಒತ್ತಿಕೊಂಡು ಅಳುತ್ತಿರುತ್ತಾನೆ ಸತ್ಯ, ಅದೇ ವೇಳೆಗೆ ಸಿಹಿಯನ್ನು ಹುಡುಕಿಕೊಂಡು ಸೀತಾ ಬರುತ್ತಾಳೆ ಮತ್ತು ಆ ದೃಶ್ಯವನ್ನು ನೋಡಿದ ಸೀತಾಗೆ ಬಹಳ ಖುಷಿಯಾಗುತ್ತದೆ.

ಸೀತಾ ಬಂದದ್ದನ್ನು ನೋಡಿದ ಸತ್ಯ ಸೋಫಾ ಇಂದ ಮೇಲೆದ್ದು ನಮಸ್ಕಾರ ಎಂದು ವಿಶ್ ಮಾಡಿ ನಂತರ ಇಬ್ಬರು ಕೆಲ ಮಾತುಗಳನ್ನು ಆಡುತ್ತಾರೆ. ಸೀತಾಳ ಮಾತುಗಳನ್ನು ಕೇಳಿದ ಸತ್ಯಗೆ ತುಂಬಾ ಖುಷಿಯಾಗುತ್ತದೆ ಮತ್ತು ನೀನು ಬೇಗ ಈ ಮನೆಗೆ ಸೊಸೆಯಾಗಿ ಬರಬೇಕು ಎಂದು ಹೇಳುತ್ತಾನೆ.

Similar Posts

Leave a Reply

Your email address will not be published. Required fields are marked *