Seetha Raama: ವಾಣಿಯ ಒಡವೆಗಳನ್ನು ಸೀತಾಗೆ ನೀಡಿದ ಸೂರ್ಯ ಪ್ರಕಾಶ್

ರಾಮ್ ಸೀತಾಳನ್ನು ಮದುವೆಯಾದರೆ ಸಂಪೂರ್ಣ ಆಸ್ತಿ ನನಗೆ ಸಿಗುತ್ತದೆ ಎಂದು ನಂಬಿರುವ ಭಾರ್ಗವಿ ರಾಮ್ ಸೀತಾ ಮದುವೆಯ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡಿದ್ದಾಳೆ. ಆರಂಭದಲ್ಲಿ ಸೀತಾ ಮತ್ತು ರಾಮ್ ಇಬ್ಬರನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದ ಭಾರ್ಗವಿ, ಕ್ರಮೇಣ ಸೀತಾಳಿಗೆ ಹಣದ ಮೇಲೆ ಆಸೆ ಹಾಗು ವ್ಯಾಮೋಹ ಇಲ್ಲ ಎಂಬುದನ್ನು ಅರಿತು, ಸೀತಾ ಈ ಮನೆ ಸೊಸೆಯಾಗಿ ಬಂದರೆ ನನ್ನ ಪ್ಲಾನ್ ಪ್ರಕಾರ ಸಂಪೂರ್ಣ ಆಸ್ತಿಯನ್ನು ನನ್ನ ಕೈ ಸೇರುತ್ತದೆ ಎಂದು ಈ ಮದುವೆ ಆಗಲಿ ಎಂದು ಒಪ್ಪಿಕೊಳ್ಳುತ್ತಾಳೆ.

ಸೂರ್ಯ ಪ್ರಕಾಶ್ ಮಾತಿಗೆ ಕೋಪಗೊಂಡ ಭಾರ್ಗವಿ

ದೇಸಾಯಿ ಮನೆಯಲ್ಲಿ ಸೀತಾ ಮತ್ತು ರಾಮ್ ರ ನಿಶ್ಚಿತಾರ್ಥ ಕಾರ್ಯಕ್ರಮ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಸಾಧನಾ ಹಾಗು ಭಾರ್ಗವಿ ನಿಶ್ಚಿತಾರ್ಥಕ್ಕೆ ಸೀತಾಳಿಗೆ ಬೇಕಾದ ವಡವೆಯ ಡಿಸೈನ್ ಗಳನ್ನು ನೋಡುತ್ತಿದ್ದಾರೆ. ಇಬ್ಬರೂ ಸೇರಿ ಕೆಲವು ಒಡೆವೆಗಳ ಸಾಂಪಲ್ಸ್ ಗಳನ್ನು ಮಾವ ಸೂರ್ಯ ಪ್ರಕಾಶ್ ದೇಸಾಯಿಗೆ ತೋರಿಸುತ್ತಾರೆ.

Bhargavi, Surya Prakash and Saadhana discussing about Ram's engagement
Image Credit: ZEE5

ಒಡೆವೆಗಳ ಡಿಸೈನ್ ನೋಡಿದ ಸೂರ್ಯ ಪ್ರಕಾಶ್, ಈ ಎಲ್ಲ ಡಿಸೈನ್ ಗಳು ಸೀತಾಳಿಗೆ ತುಂಬಾ ಚೆನ್ನಾಗಿ ಕಾಣಿಸುತ್ತವೆ. ಇವುಗಳ ಜೊತೆ ವಾಣಿಯ (ರಾಮ್ ತಾಯಿ) ಹಳೆ ಒಡವೆಗಳು ನಿನ್ನ ಹತ್ತಿರ ಇದಿಯಲ್ಲ ಅವುಗಳನ್ನು ಕೂಡ ಸೀತಾಗೆ ಕೊಟ್ಟಬಿಡು ಎಂದು ಭಾರ್ಗವಿಗೆ ಹೇಳುತ್ತಾನೆ.

ವಾಣಿಯ ಹಳೆ ಒಡವೆಗಳನ್ನು ಸೀತಾಳಿಗೆ ಕೊಡು ಎಂದು ಹೇಳಿದ ತಕ್ಷಣ, ಭಾರ್ಗವಿ ಮನಸ್ಸಲ್ಲಿಯೇ ಸೂರ್ಯ ಪ್ರಕಾಶ್ ವಿರುದ್ಧ ಕೋಪಗೊಳ್ಳುತ್ತಾಳೆ. ಇದನ್ನೆಲ್ಲಾ ಅಲ್ಲಿಯೇ ಪಕ್ಕದ ಸೋಫಾದಲ್ಲಿ ಕೂತು ಗಮನಿಸುತ್ತಿದ್ದ ಸತ್ಯ(ರಾಮ್ ಚಿಕ್ಕಪ್ಪ) ಭಾರ್ಗವಿಯ ಕೋಪವನ್ನು ನೋಡಿ ಮನಸ್ಸಿನಲ್ಲಿಯೇ “ಬಚ್ಚಿಟ್ಟಿದ್ದು ತನಗೆ ಕೂಡಿಟ್ಟಿದ್ದು ಪರರಿಗೆ” ಎಂದು ನಗುತ್ತಾನೆ.

ಇದನ್ನೂ ಓದಿರಿ: Shravani Subramanya: ಶ್ರಾವಣಿ ನನ್ನ ಮಗಳೇ ಅಲ್ಲ ಎಂದ ವೀರೇಂದ್ರನಾಥ ದೇಸಾಯಿ

ಸೀತಾಳ ಹುಟ್ಟುಹಬ್ಬ ಆಚರಿಸಲು ಪ್ಲಾನ್ ಮಾಡುತ್ತಿರುವ ರಾಮ್

Ram and Seetha
Image Credit: ZEE5

ರಾಮ್ ಮತ್ತು ಸೀತಾಳ ನಿಶ್ಚಿತಾರ್ಥಕ್ಕೂ ಮೊದಲು, ಸೀತಾಳ ಹುಟ್ಟು ಹಬ್ಬ ಇರುವುದನ್ನು ತಿಳಿದುಕೊಂಡ ರಾಮ್, ಈ ಸಲ ಸೀತಾ ಬರ್ತ್ ಡೇಯನ್ನು ತುಂಬಾ ಗ್ರಾಂಡ್ ಆಗಿ ಸೆಲೆಬ್ರೆಟ್ ಮಾಡ್ಬೇಕು ಅಂತ ಅಂದುಕೊಳ್ಳುತ್ತಾನೆ. ಈ ವಿಷಯವನ್ನು ಸೀತಾಳಿಗೆ ಹೇಳಿದಾಗ, ಅವಳಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಇಷ್ಟವಿಲ್ಲ ಎಂದು ಉತ್ತರ ಬರುತ್ತದೆ.

ಆದರೆ, ರಾಮ್ ತನ್ನ ಬಾಳ ಸಂಗಾತಿಯ ಹುಟ್ಟುಹಬ್ಬವನ್ನು ತಾನಂದುಕೊಂಡಂತೆ ಆಚರಿಸಲೇಬೇಕು ಎಂದು ಸಿಹಿಗೆ ಕಾಲ್ ಮಾಡಿ ಈ ವಿಷಯದ ಬಗ್ಗೆ ಮಾತನಾಡುತ್ತಾನೆ. ಸೀತಾಳಿಗೆ ತಿಳಿಯದಂತೆ ನಾವಿಬ್ಬರೂ ಸೇರಿ ಹುಟ್ಟುಹಬ್ಬದ ತಯಾರಿಯನ್ನು ಮಾಡೋಣ ಎಂದು ರಾಮ್ ಹೇಳಿದಾಗ, ಸಿಹಿಯು ಕೂಡ ಈ ಮಾತಿಗೆ ಒಪ್ಪುತ್ತಾಳೆ.

Similar Posts

Leave a Reply

Your email address will not be published. Required fields are marked *