Seetha Raama: 400 ರೂ. ಚಾಲೆಂಜ್ ಒಪ್ಪಿಕೊಂಡ ಶ್ರೀ ರಾಮ್ ದೇಸಾಯಿ

ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ನಿಶ್ಚಿತಾರ್ಥ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಭಾರ್ಗವಿಗೆ ಸೀತೆಯ ಮೇಲೆ ಕೋಪವಿದ್ದರೂ ಅದನ್ನು ಯಾರ ಮುಂದೆಯೂ ತೋರಿಸಿಕೊಳ್ಳುತ್ತಿಲ್ಲ.

Bhargavi
Image Credit: Zee5

ನಿಶ್ಚಿತಾರ್ಥಕ್ಕೆ ವಜ್ರದ ಉಂಗುರದ ಅಗತ್ಯವಿಲ್ಲ ಎಂದು ಹೇಳುತ್ತಿರುವ ಸೀತಾಗೆ ರಾಮ್ ಕನ್ವಿನ್ಸ್ ಮಾಡುತ್ತಾನೆ. ಆದರೂ, ಸೀತಾ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ಕಾರಣ, ಮಿಡಲ್ ಕ್ಲಾಸ್ ಲೈಫ್ಸ್ಟೈಲ್ ಗೂ ಹಾಗು ನಿಮ್ಮಂತಹ ಶ್ರೀಮಂತರ ಲೈಫ್ಸ್ಟೈಲ್ ಗು ಬಹಳ ವ್ಯತ್ಯಾಸವಿದೆ ಎಂದು ಹೇಳುತ್ತಾಳೆ.

ಇದಕ್ಕೆ ಉತ್ತರಿಸುವ ರಾಮ್, ನಾನು ಕೂಡ ನಿಮ್ಮ ಲೈಫ್ಸ್ಟೈಲ್ ಗೆ ಅಡ್ಜಸ್ಟ್ ಆಗ್ತೀನಿ ಆದರೆ, ಕೆಲವೊಂದನ್ನು ನೀನು ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದು ಸೀತಾಳಿಗೆ ಹೇಳುತ್ತಾನೆ. ಆಗ ಸೀತಾ, ಕೇವಲ 400 ರೂಪಾಯಿಯಲ್ಲಿ ಒಂದು ದಿನ ಪೂರ್ತಿ ನಿಮ್ಮ ಜೀವನ ನಡೆಸಬೇಕು ಎಂದು ರಾಮ್ ಗೆ ಚಾಲೆಂಜ್ ಹಾಕುತ್ತಾಳೆ. ಈ ಚಾಲೆಂಜ್ ಅನ್ನು ರಾಮ್ ಕೂಡ ಒಪ್ಪಿಕೊಳ್ಳುತ್ತಾನೆ.

400 ರೂ. ಚಾಲೆಂಜ್ ಒಪ್ಪಿಕೊಂಡ ಶ್ರೀ ರಾಮ್ ದೇಸಾಯಿ

400 Rs. Shri Ram Desai accepted the challenge
Image Credit: Zee5

ಮರುದಿನ ಬೆಳಿಗ್ಗೆ ರಾಮ್ ಗೆ ಸೀತಾ ಹೇಳಿದ 400 ರೂ. ಚಾಲೆಂಜ್ ಬಗ್ಗೆ ಪ್ರತಿಧ್ವನಿಸುತ್ತಿರುವ ಸೀತೆಯ ಮಾತುಗಳೊಂದಿಗೆ ಎಚ್ಚರಗೊಳ್ಳುತ್ತಾನೆ. ಎದ್ದ ನಂತರ ತನಗೆ ತಾನೇ ಒಂದು ಸವಾಲನ್ನು ಹಾಕಿಕೊಳ್ಳುತ್ತಾನೆ, ಕೇವಲ 400 ರೂಪಾಯಿಗಳಲ್ಲಿ ಇಡೀ ದಿನದ ಖರ್ಚು ವೆಚ್ಚಗಳನ್ನು ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಚಿಕ್ಕಪ್ಪ ವಿಶ್ವನ ಹತ್ತಿರ 400 ರೂ ಸಾಲ ತೆಗೆದುಕೊಂಡು, ತನ್ನ ಪ್ರಯಾಣವನ್ನು ರಾಮ್ ಪ್ರಾರಂಭಿಸುತ್ತಾನೆ.

ತನ್ನ ಬಜೆಟ್ ಅನ್ನು ಲೆಕ್ಕಹಾಕಿ ಕಾರನ್ನು ಬಿಟ್ಟು ಆಟೋದಲ್ಲಿ ತನ್ನ ಆಫೀಸ್ ಗೆ ತಲುಪುತ್ತಾನೆ. ಆಗ ಆಟೋ ಚಾರ್ಜ್ 290 ರೂಪಾಯಿಗಳು ಆಗುತ್ತದೆ, ಈಗ ಅವನ ಬಳಿ 110 ರೂಪಾಯಿಗಳು ಉಳಿದಿವೆ. ನಂತರ, 45 ರೂಪಾಯಿಗೆ ತಿಂಡಿಯನ್ನು ತಿಂದು ಆಫೀಸ್ ಗೆ ಹೊರಡುತ್ತಾನೆ. ಆಫೀಸ್ ಹತ್ತಿರ ಹೋಗುತ್ತಿದ್ದಂತೆ ಅವನಿಗೆ ಸೀತಾ ಕಾಣಿಸಿಕೊಳ್ಳುತ್ತಾಳೆ. ಆಗ ರಾಮ್ ಸೀತಾಳಿಗೆ, “ನಿಮಿಗೊಂದು ಸರ್ಪ್ರೈಸ್ ಇದೆ, ಅದೇನ್ ಗೊತ್ತಾ? ನಾಳೆ ನನ್ನ ನಿಮ್ಮ ಎಂಗೇಜ್ಮೆಂಟ್” ಎಂದು ಹೇಳುತ್ತಾನೆ. ಇದನ್ನು ಕೇಳಿದ ಮೇಲೆ ಸೀತಾಗೆ ಬಹಳ ಖುಷಿಯಾಗುತ್ತದೆ.

ರುದ್ರಪ್ರತಾಪನ ಮೋಸದ ಬಲೆಯೊಳಗೆ ಅಂಜಲಿ

Anjali
Credit Image: Zee5

ಪ್ರಿಯಾ ತಾಯಿ ಪ್ರೇಮಾ ಅವರ ಹುಟ್ಟುಹಬ್ಬ ಇರುವ ಕಾರಣ, ಅಶೋಕ್ ಸೇರಿದಂತೆ ಅಂಜಲಿ ಹಾಗು ಪ್ರಿಯಾ ಮೂವರೂ ಸೇರಿ ಪ್ರೇಮಾ ಹುಟ್ಟುಹಬ್ಬವನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಸಂಜೆ ಮನೆಗೆ ಬರುವಾಗ ಕೇಕ್ ತರುವುದಾಗಿ ಅಂಜಲಿ ಹೇಳಿರುತ್ತಾಳೆ. ಆದರೆ, ದಾರಿಯಲ್ಲಿ ರುದ್ರ ಪ್ರತಾಪ್ ಎದುರಾಗುತ್ತಾನೆ ಹಾಗೂ ನನ್ನ ಜೊತೆಗೆ ಸ್ವಲ್ಪ ಸಮಯ ಕಳೆಯಿರಿ, ನಿಮ್ಮಿಂದ ದೂರ ಇರಲು ಆಗುತ್ತಿಲ್ಲ ಎಂದು ಗೋಳಾಡುತ್ತಾನೆ.

ಆದರೆ, ಹುಟ್ಟುಹಬ್ಬ ಆಚರಿಸಲು ಮನೆಯಲ್ಲಿ ಎಲ್ಲರೂ ಕಾಯುತ್ತಿರುತ್ತಾರೆ ಎಂದು ಹೇಳಿ ಅಂಜಲಿ ಅಲ್ಲಿಂದ ಹೊರಟು ಬಿಡುತ್ತಾಳೆ. ಆದರೂ ಸುಮ್ಮನಿರದ ರುದ್ರ ಪ್ರತಾಪ್ ಅಂಜಲಿಗೆ ಪದೇ ಪದೇ ಫೋನ್ ಮಾಡುತ್ತಿರುತ್ತಾನೆ. ರುದ್ರ ಪ್ರತಾಪ್ ಎಷ್ಟೇ ಫೋನ್ ಮಾಡಿದರೂ ಕೂಡ ರೆಸ್ಪಾನ್ಸ್ ಮಾಡಲಾಗದೇ ಅಂಜಲಿ ಒದ್ದಾಡುತ್ತಿರುತ್ತಾಳೆ. ಇದನ್ನೆಲ್ಲ ಗಮನಿಸಿದ ಪ್ರೇಮಾ, ಅಂಜಲಿ ಯಾವುದೋ ಸಮಸ್ಯೆಯಲ್ಲಿ ಸಿಲುಕಿದ್ದಾಳೆ ಎಂದು ಧೃಢಪಡಿಸಿಕೊಳ್ಳುತ್ತಾಳೆ.

Similar Posts

Leave a Reply

Your email address will not be published. Required fields are marked *