ಸುಬ್ಬುವಿನ ಮನೆಯಲ್ಲಿ ದೊಡ್ಡ ಸಮಸ್ಯೆ ಎದುರಾಗಿದೆ. ಸುಬ್ಬುವಿನ ಭಾವ ಮನೆಗೆ ಬಂದು ವರದಕ್ಷಿಣೆ ಹಣ ಕೊಡಿ ಇಲ್ಲವಾದರೆ ನಿಮ್ಮ ಅಕ್ಕನಿಗೆ ಡಿವೋರ್ಸ್ ಕೊಡ್ತಿನಿ ಅಂತ ಡೈವೋರ್ಸ್ ಪೇಪರ್ ತಂದು ಹೆದರಿಸುತ್ತಾನೆ. ಮನೆ ಅಳಿಯನ ಈ ಮಾತುಗಳನ್ನು ಕೇಳಿದ ಮನೆಯವರಿಗೆಲ್ಲ ಆತಂಕ ಭಯ ಶುರುವಾಗುತ್ತದೆ, ಅದರಲ್ಲಿಯೂ ಸುಬ್ಬುಗೆ ಭಾವ ಡಿವೋರ್ಸ್ ನೀಡಿದರೆ ತನ್ನ ಅಕ್ಕನ ಜೀವನ ಹೇಗೆ? ಎಂಬ ಭಯ ಶುರುವಾಗಿಬಿಡುತ್ತದೆ.

ಒಂದೇ ಸಲ 5 ಲಕ್ಷ ಕೇಳಿದ ಅಕ್ಕನ ಗಂಡ

Shravani Subramanya
Image Credit: ZEE5

ವರದಕ್ಷಿಣೆಯನ್ನು ತಿಂಗಳು ತಿಂಗಳು ಕೊಟ್ಟು ತೀರಿಸುತ್ತೇನೆ ಎಂದು ಸುಬ್ಬು ಭಾವನಿಗೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಾನೆ, ಆದರೆ ದುಡ್ಡಿಗಾಗಿಯೇ ಡಿವೋರ್ಸ್ ನಾಟಕ ಆಡುತ್ತಿರುವ ಭಾವ ಹೀಗೆ ಹೇಳುತ್ತಾನೆ, “ನೋಡು ಭಾಮೈದ ನೀನು ತಿಂಗಳು ತಿಂಗಳು ಕೊಡೊ ದುಡ್ಡು ನನಿಗೆ ಯಾವದಕ್ಕೂ ಸಾಲಲ್ಲ, ನಾನು ಹೊಸ ಬಿಸಿನೆಸ್ ಮಾಡ್ಬೇಕು ಅಂದ್ಕೊಂಡಿದಿನಿ ಅದುಕ್ಕೆ 5 ಲಕ್ಷ ಕಮ್ಮಿ ಇದೆ ಅದುನ್ನ ನೀನ್ ಇನ್ನ 1 ಗಂಟೆಯೊಳಗೆ ಕೊಟ್ಟುಬಿಟ್ರೆ ಡಿವೋರ್ಸ್ ಮಾತೆ ಎತ್ತಲ್ಲ. ನಿಮ್ಮ್ ಅಕ್ಕನ್ನ ನನ್ನ ಜೊತೆ ಕರ್ಕೊಂಡು ಹೋಗ್ತೀನಿ ಅಕಸ್ಮಾತ್ ಆಗಲ್ಲ ಅಂದ್ರೆ ನಿಮ್ಮ್ ಅಕ್ಕ ಪರ್ಮನೆಂಟ್ ಆಗಿ ನಿಮ್ಮ ಮನೇಲೇ ಇರಬೇಕಾಗುತ್ತೆ.”

ಮಿನಿಸ್ಟರ್ ಗೆ ಕಾಲ್ ಮಾಡಿ 5 ಲಕ್ಷ ಕೇಳು ಅಂದ ಭಾವ

ಸುಬ್ಬು ಕೈಯಲ್ಲಿ ದುಡ್ಡು 5 ಲಕ್ಷ ಕೊಡೋಕೆ ಆಗಲ್ಲ ಅಂತ ಗೊತ್ತಾದಾಗ ಆತನ ಭಾವ, ನೀನು ಹೆಂಗಿದ್ರು ಮಿನಿಸ್ಟರ್ ಬಲಗೈ ಬಂಟ ತಾನೇ ಅವರ ಹತ್ರ ದುಡ್ಡು ಕೇಳು ಇಮ್ಮೀಡಿಯೇಟ್ ಆಗಿ ದುಡ್ಡು ಸಿಗುತ್ತೆ ಅಂತ ಹೇಳ್ತಾನೆ. ಆದರೆ, ಸ್ವಾಭಿಮಾನಿಯಾದ ಸುಬ್ಬು ನಾನ್ ಕೇಳಲ್ಲ ಅಂತ ಹೇಳ್ದಾಗ, ಸಿಟ್ಟಿಗೆದ್ದ ಭಾವ ಸರಿ ನಾನ್ ಇನ್ನು ಬರ್ತೀನಿ ಕೋರ್ಟ್ ಅಲ್ಲಿ ಮೀಟ್ ಆಗತೀನಿ ಅಂತ ಹೇಳಿ ಹೊರಡ್ತಾನೆ.

ಸರಿಯಾದ ಸಮಯಕ್ಕೆ ಶ್ರಾವಣಿಯ ಎಂಟ್ರಿ

Shravani Subramanya
Image Credit: ZEE5

ಭಾವ ಹೊರಡ್ಬೇಕು ಅನ್ನೋ ಅಷ್ಟ್ರಲ್ಲಿ ಸುಬ್ಬುವಿನ ಮನೆಗೆ ಶ್ರಾವಣಿಯ ಎಂಟ್ರಿಯಾಗುತ್ತೆ, ಅವಳು ಇದುವರೆಗೂ ನಡೆದ ಎಲ್ಲ ವಿಷಯವನ್ನು ಬಾಗಿಲ ಹತ್ರ ನಿಂತು ನೋಡಿರುತ್ತಾಳೆ. “ನಾನು ಯಾರ್ ಗೊತ್ತಲ್ಲ, ಮಿನಿಸ್ಟರ್ ಮಗಳು, ಕಾಮೇಶನರ್ ಗೆ ಒಂದ್ ಫೋನ್ ಮಾಡುದ್ರೆ ಸಾಕು ವರದಕ್ಷಿಣೆ ಕಿರುಕುಳ ಕೇಸಲ್ಲಿ ೨೦ ವರ್ಷ ಜೈಲಲ್ಲಿ ಕಂಬಿ ಎಣಿಸಬೇಕಾಗುತ್ತೆ. ಎಂದು ಶ್ರಾವಣಿ ಸುಬ್ಬು ಭಾವನಿಗೆ ಹೆದರಿಸುತ್ತಾಳೆ.”

ಶ್ರಾವಣಿಯ ಮಾತಿಗೆ ಹೆದರಿದ ಸುಬ್ಬುವಿನ ಭಾವ

ಶ್ರಾವಣಿ ಹೇಳಿದ ವರದಕ್ಷಿಣೆ ಕೇಸ್ ಬಗ್ಗೆ ಕೇಳಿ ಸುಬ್ಬು ಭಾವ ಫುಲ್ ಹೆದರಿ ಬಿಡುತ್ತಾನೆ. ಇಲ್ಲ ಮೇಡಂ ನಾನು ಸುಮ್ನೆ ತಮಾಷೆ ಮಾಡ್ತಿದ್ದೆ, ನನ್ನ ಹೆಂಡ್ತಿನ ಮಗುನ ನಾನೇ ಕರ್ಕೊಂಡು ಹೋಗತೀನಿ, ವರದಕ್ಷಿಣೆ ಎಲ್ಲ ಬೇಡ ಬಿಡಿ ಅಂತ ಫುಲ್ ಕಾಂಪ್ರೊವ್ ಆಗ್ತಾನೆ ಸುಬ್ಬು ಭಾವ. ಮನೆ ಅಳಿಯ ವರದಕ್ಷಿಣೆ ಬೇಡ ಅಂದಿದ್ದನ್ನು ಕೇಳಿದ ಮನೆಯವರೆಲ್ಲ ಶ್ರಾವಣಿಗೆ ಧನ್ಯವಾದಗಳನ್ನು ತಿಳಿಸುತ್ತಾರೆ. ಈ ರೀತಿ ಸರಿಯಾದ ಸಮಯಕ್ಕೆ ಬಂದು ಸುಬ್ಬು ಅಕ್ಕನ ಜೀವನವನ್ನು ಶ್ರಾವಣಿ ಸರಿ ಮಾಡುತ್ತಾಳೆ.

Similar Posts

Leave a Reply

Your email address will not be published. Required fields are marked *