Shravani Subramanya: ಶ್ರಾವಣಿ ಎಕ್ಸಾಮ್ ಫೇಲ್ ಆಗಲು ಪ್ಲಾನ್ ಮಾಡಿದ ವಿಜಯಾಂಬಿಕೆ

ಸೀಕ್ರೆಟ್ ರೂಮಿನಲ್ಲಿ ಸಿಕ್ಕ ಹಳೆಯ ಪತ್ರಗಳ ಮೂಲಕ ತನ್ನ ತಂದೆ ನಾನು ಚಿಕ್ಕವಳಿದ್ದಾಗ ನನ್ನನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ಶ್ರಾವಣಿ ತಿಳಿದುಕೊಂಡಿದ್ದಾಳೆ. ಅದೇ ಪತ್ರ ವೀರೇಂದ್ರನಾಥ ದೇಸಾಯಿ ಕಣ್ಣಿಗೆ ಬಿದ್ದು, ಮನೆಯಲ್ಲಿ ದೊಡ್ಡ ಜಗಳವಾಗಿ ಅಪ್ಪ ಮಗಳು ಇಬ್ಬರೂ ಕಣ್ಣೀರು ಹಾಕಿದರು. ತನ್ನ ತಂದೆ ನನಗೆ ಪ್ರೀತಿ ನೀಡಲು ಮುಂದಾಗುತ್ತಿಲ್ಲ ಎಂದುಕೊಂಡ ಶ್ರಾವಣಿ ಎಕ್ಸಾಮ್ ಬರೆಯದೇ ಇರಲು ನಿರ್ಧರಿಸಿ, ತನ್ನ ರೂಮಿನಲ್ಲಿ ಒಬ್ಬಳೇ ಅಳುತ್ತಾ ಇರುತ್ತಾಳೆ.

Shravani Subramanya conversation
Image Credit: ZEE5

ಶ್ರಾವಣಿಗೆ ಸಮಾಧಾನ ಪಡಿಸಿದ ಸುಬ್ಬು

ಶ್ರಾವಣಿ ರೂಮಿಗೆ ಬಂದ ಸುಬ್ಬು, ಶ್ರಾವಣಿ ಅಳುತ್ತಾ ಇರುವುದನ್ನು ನೋಡಿ ಬಹಳ ನೊಂದುಕೊಳ್ಳುತ್ತಾನೆ. ನಂತರ ಶ್ರಾವಣಿಯನ್ನು ಸಮಾಧಾನ ಪಡಿಸಲು ಮುಂದಾಗುವ ಸುಬ್ಬು, ಶ್ರಾವಣಿಗೆ ಯಾಕ್ ಮೇಡಂ ಅಳುತ್ತಿದ್ದೀರಾ ಎಂದು ಕೇಳುತ್ತಾನೆ. ತನಗೆ ಸಿಕ್ಕ ಹಳೆಯ ಪತ್ರಗಳನ್ನು ಮತ್ತು ಉಡುಗೊರೆಗಳನ್ನು ಸುಬ್ಬುಗೆ ತೋರಿಸಿದ ಶ್ರಾವಣಿ, ನಾನು ಚಿಕ್ಕವಳಿದ್ದಾಗ ಅಪ್ಪ ನನ್ನನ್ನು ಎಷ್ಟೊಂದು ಪ್ರೀತಿ ಮಾಡುತ್ತಿದ್ದರು, ಆದರೆ ಈಗ ನನ್ನ ಮೇಲೆ ಯಾಕೆ ಇಷ್ಟೊಂದು ದ್ವೇಷ ಮಾಡ್ತಾ ಇದ್ದಾರೆ ಮತ್ತು ಅದುಕ್ಕೆ ಕಾರಣ ಏನು ಏನ್ ಸುಬ್ಬು ಎಂದು ಅಳುತ್ತಾ ಕೇಳುತ್ತಾಳೆ.

ನಂತರ ಸುಬ್ಬು ಮಾತು ಮುಂದುವರೆಸಿ ಹೀಗೆ ಹೇಳುತ್ತಾನೆ, “ಮೇಡಂ ಯಜಮಾನ್ರು ಮತ್ತೆ ನಿಮ್ಮನ್ನ ನಿಧಾನಕ್ಕೆ ಪ್ರೀತಿ ಮಾಡ್ತಾರೆ ನಂಬಿಕೆ ಇಡಿ, ಆದರೆ ನಾಳೆ ನಿಮಗೆ ಎಕ್ಸಾಮ್ ಇದೆ ನೀವು ಈ ತರ ಅಳ್ತಾ ಇದ್ರೆ ಎಕ್ಸಾಮ್ ಅಲ್ಲಿ ಏನ್ ಬರೀತೀರಾ?” ಎಂದು ಸಮಾಧಾನ ಪಡಿಸಲು ಮುಂದಾಗುತ್ತಾನೆ. ಇದಕ್ಕೆ ಪ್ರಕ್ರಿಯಿಸಿದ ಶ್ರಾವಣಿ ನಾನು ಎಕ್ಷಮ ಬರೆಯುವುದಿಲ್ಲ ಎಂದು ಹೇಳುತ್ತಾಳೆ.

ಆದರೆ, ಈ ಎಕ್ಸಾಮ್ ನಿಮಗೆ ಎಷ್ಟು ಮುಖ್ಯವಾಗಿದೆ ಎಂದು ಶ್ರಾವಣಿಗೆ ಸುಬ್ಬು ಅರ್ಥ ಮಾಡಿಸುತ್ತಾನೆ. ನಂತರ ಶ್ರಾವಣಿಯು ಸಹ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಬ್ಬು ಹೇಳಿದ ಹಾಗೆ ಎಕ್ಸಾಮ್ ಬರೆಯಲು ನಿರ್ಧರಿಸಿ ಓದಿಕೊಳ್ಳಲು ಶುರು ಮಾಡುತ್ತಾಳೆ.

ಶ್ರಾವಣಿ ಎಕ್ಸಾಮ್ ನಲ್ಲಿ ಫೇಲ್ ಆಗಲು ಪ್ಲಾನ್ ಮಾಡಿದ ವಿಜಯಂಬಿಕೆ

Vijayambike and Madhan
Image Credit: ZEE5

ವೀರೇಂದ್ರನಾಥ ದೇಸಾಯಿ ಜೊತೆ ಮಾತನಾಡುವ ವಿಜಯಂಬಿಕೆ, ಶ್ರಾವಣಿಯ ಎಕ್ಸಾಮ್ ಬಗ್ಗೆ ಹೇಳುತ್ತಾಳೆ. ಆಗ ಪ್ರತಿಕ್ರಿಯಿಸುವ ವೀರೇಂದ್ರನಾಥ್, “ಶ್ರಾವಣಿ ಎಕ್ಸಾಮ್ ಅಲ್ಲಿ ಫೇಲ್ ಆದ್ರೆ ಮದುವೆ ಮಾಡಿ ಕಳುಸ್ತಿನಿ ಅಕ್ಕ, ಅಕಸ್ಮಾತ್ ಪಾಸ್ ಆದ್ರೆ ಅವಳನ್ನ ಮುಂದಕ್ಕೆ ಓದುಸ್ತೀನಿ, ಅವಳಿಗೆ ಎಲ್ಲಿವರ್ಗು ಓದಬೇಕು ಅಂತ ಇಷ್ಟ ಇದಿಯೋ ಅಲ್ಲಿವರ್ಗು ಓದುಸ್ತೀನಿ” ಅಂತ ಹೇಳುತ್ತಾನೆ. ವೀರುವಿನ ಈ ಮಾತುಗಳನ್ನು ಕೇಳಿದ ವಿಜಯಂಬಿಕೆಗೆ ಭಯ ಶುರುವಾಗುತ್ತದೆ, ತಕ್ಷಣ ತನ್ನ ಮಗನ ರೂಮಿಗೆ ಹೋಗಿ ಮಧನ್ ಗೆ ಈ ವಿಷಯದ ಬಗ್ಗೆ ತಿಳಿಸುತ್ತಾಳೆ.

“ನೀನು ಏನ್ ಮಾಡ್ತೀಯೋ ನನಿಗೆ ಗೊತ್ತಿಲ್ಲ, ಆದ್ರೆ ಶ್ರಾವಣಿ ಈ ಎಕ್ಸಾಮ್ ಬರಿಬಾರ್ದು, ಅಕಸ್ಮಾತ್ ಬರುದ್ರು ಪಾಸ್ ಆಗಬಾರದು” ಅಂತ ಮದನ್ ಗೆ ಅಮ್ಮ ವಿಜಯ ಹೇಳುತ್ತಾಳೆ. ಅಮ್ಮನ ಈ ಮಾತಿಗೆ ಪ್ರತಿಕ್ರಿಯುಸುವ ಮದನ್, ನಾಳೆ ನಡಿಯೋ ಎಕ್ಸಾಮ್ ಅಲ್ಲಿ ಶ್ರಾವಣಿ ಪಾಸ್ ಆಗಲ್ಲ, ಫೇಲ್ ಆಗಿ ನಾನ್ ಕಟ್ಟೋ ತಾಳಿಗೆ ಕುತ್ತಿಗೆ ಕೊಡ್ತಾಳೆ ನೋಡ್ತಿರು” ಎಂದು ಹೇಳುತ್ತಾನೆ.

ಸುಬ್ಬುಗೆ ಸುಳ್ಳು ಹೇಳಿದ ಪದ್ಮನಾಭ

ಶ್ರಾವಣಿ ತೋರಿಸಿದ ಹಳೆಯ ಪತ್ರಗಳು ಮತ್ತು ಉಡುಗೊರೆಗಳನ್ನು ನೋಡಿದ ಸುಬ್ಬು, “ಯಜಮಾನ್ರು ಶ್ರಾವಣಿ ಮೇಡಂ ನ ಯಾಕ್ ದ್ವೇಷ ಮಾಡ್ತಾರೆ ಹಾಗೆ, ಯಜಮಾನ್ರು ಹೆಂಡ್ತಿ ಯಜಮಾನ್ರುನ್ನ ಯಾಕ್ ಬಿಟ್ಟು ಹೋದರು” ಎಂದು ತನ್ನ ಮನೆಯಲ್ಲಿ ಯೋಚಿಸುತ್ತಾ ಇರುತ್ತಾನೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಅವನ ಅಪ್ಪ ಪದ್ಮನಾಭ ಸುಬ್ಬುಗೆ ಊಟ ಮಾಡಲು ಬಾ ಎಂದು ಕರೆಯುತ್ತಾನೆ.

Subbu and Padmanaabha
Image Credit: ZEE5

ಸುಬ್ಬುಗೆ ತನ್ನ ತಂದೆ ಬಹಳ ಹಿಂದೆ ಯಜಮಾನ್ರ ಮನೆಯಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡ್ತಾ ಇದ್ದದ್ದು ನೆನಪಾಗಿ ಅಪ್ಪನ ಹತ್ರ, “ಅಪ್ಪ ನೀನ್ ಯಜಮಾನ್ರು ಮನೇಲಿ ಕೆಲಸ ಮಾಡ್ತಾ ಇದ್ದೆ ಅಲ್ವ? ಯಜಮಾನ್ರುನ ಅವರ ಹೆಂಡ್ತಿ ಯಾಕ್ ಬಿಟ್ಟು ಹೋದರು ಮತ್ತು ಯಜಮಾನ್ರು ಶ್ರಾವಣಿ ಮೇಡಂ ನ ಯಾಕ್ ಅಷ್ಟೊಂದು ದ್ವೇಷ ಮಾಡ್ತಾರೆ?” ಎಂದು ಕೇಳುತ್ತಾನೆ.

ಸುಬ್ಬು ಈ ರೀತಿ ಕೇಳಿದ್ದನ್ನ ನೋಡಿ ಪದ್ಮನಾಭನಿಗೆ ಶಾಕ್ ಆಗುತ್ತದೆ ಹಾಗೆ, ನಾನು ಬರೀ ಡ್ರೈವರ್ ಆಗಿ ಕೆಲಸ ಮಾಡ್ತಾ ಇದ್ದಿದ್ದು, ಮನೆಯೊಳಗೇ ನಡಿಯೋ ವಿಷಯ ನನಿಗೆ ಗೊತ್ತಾಗ್ತಾ ಇರ್ಲಿಲ್ಲ ಕಣೋ ಎಂದು ಸುಳ್ಳು ಹೇಳಿ ಬಾ ಊಟ ಮಾಡೋಣ ಎಂದು ಹೇಳಿ ಆ ಮಾತನ್ನು ಅಲ್ಲಿಗೆ ಮುಗಿಸುತ್ತಾನೆ.

Similar Posts

Leave a Reply

Your email address will not be published. Required fields are marked *