ಶ್ರಾವಣಿ ಕೊಟ್ಟ 10 ಲಕ್ಷದ ಚೆಕ್ ನಿಂದ ಬಡವನಿಗೆ ಸಹಾಯ ಆಗಿದ್ದಕ್ಕೆ, ವೀರೇಂದ್ರನಾಥ್ ದೇಸಾಯಿಗೆ ಫುಲ್ ಪಬ್ಲಿಸಿಟಿ ದೊರಕಿದೆ. ಇದೇ ವಿಷಯವಾಗಿ ಸುಬ್ಬು ವೀರೇಂದ್ರನಾಥ್ ಹತ್ತಿರ ಶ್ರಾವಣಿ ಜೊತೆ ಸೆಲ್ಫಿ ತೆಗ್ಸಿಕೊಳ್ಳಲು ಒಪ್ಪಿಸಿರುತ್ತಾನೆ ಹಾಗು ಇದಕ್ಕೆ ವೀರೇಂದ್ರನಾಥ್ ಕೂಡ ಒಪ್ಪಿಗೆ ನೀಡಿರುತ್ತಾನೆ. ಈ ಖುಷಿಯ ವಿಷಯ ತಿಳಿದ ಶ್ರಾವಣಿಗೆ ರಾತ್ರಿಯೆಲ್ಲ ಸರಿಯಾಗಿ ನಿದ್ದೆಯೇ ಬಂದಿರುವುದಿಲ್ಲ ಆದರೂ ಬೆಳಿಗ್ಗೆ ಎದ್ದು ಕದ್ದು ಮುಚ್ಚಿ ಅಪ್ಪ ಯಾವ ಕಲರ್ ಡ್ರೆಸ್ ಹಾಕಿಕೊಳ್ಳುತ್ತಾರೋ ಎಂದು ತಿಳಿದುಕೊಂಡು ತಾನು ಸಹ ಮ್ಯಾಚಿಂಗ್ ಕಲರ್ ಡ್ರೆಸ್ ಅನ್ನು ಹಾಕಿ ಅಪ್ಪನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕಾಯುತ್ತಿರುತ್ತಾಳೆ.

ಕೊನೆಗೂ ಸಿಕ್ತು ಅಪ್ಪನ ಜೊತೆ ಸೆಲ್ಫಿಯ ಭಾಗ್ಯ

Shravani taking selfie with dad - Shravani Subramanya Serial
Image Credit: ZEE5

ವೀರೇಂದ್ರನಾಥ್ ರೆಡಿಯಾಗಿ ದೇವರ ಮನೆ ಹತ್ತಿರ ಬಂದು ದೇವರಿಗೆ ನಮಸ್ಕರಿಸಿ ತನ್ನ ಕೆಲಸಕ್ಕೆ ಹೊರಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಶ್ರಾವಣಿ ತನ್ನ ಚಿಕ್ಕಪ್ಪನ ಮೂಲಕ ಸೆಲ್ಫಿ ವಿಷಯವನ್ನು ಅಪ್ಪನಿಗೆ ಕೇಳುವಂತೆ ಹೇಳುತ್ತಾಳೆ. ಸೆಲ್ಫಿ ತೆಗೆಸಿಕೊಳ್ಳಲು ಒಪ್ಪಿಗೆ ನೀಡಿದ್ದರ ಬಗ್ಗೆ ವೀರೇಂದ್ರನಾಥ್ ಗೆ ತನ್ನ ತಮ್ಮನಿಂದ ಮತ್ತೆ ನೆನಪಾಗಿ ಸರಿ ಕೇವಲ 5 ನಿಮಿಷ ಮಾತ್ರ ಎಂದು ಸಮಯ ನೀಡುತ್ತಾನೆ. ಈಗ ಶ್ರಾವಣಿ ಖುಷಿಯಲ್ಲಿ ಅಪ್ಪನ ಹತ್ತಿರ ಬಂದು ತನ್ನ ಮೊಬೈಲ್ ನಲ್ಲಿ ತನ್ನ ಮತ್ತು ಅಪ್ಪನ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾಳೆ. ಇದೆ ವೇಳೆ ಶ್ರಾವಣಿ ಬ್ಯಾಲೆನ್ಸ್ ತಪ್ಪಾಗಿ ಕೆಳಗೆ ಬೀಳುವಾಗ ವೀರೇಂದ್ರನಾಥ ಮಗಳನ್ನು ಅಂದರೆ ಶ್ರಾವಣಿಯನ್ನು ಕೈಯಲ್ಲಿ ಹಿಡಿದು ಕೆಳಗೆ ಬೀಳದಂತೆ ಕಾಪಾಡುತ್ತಾನೆ. ಇದೇ ಸಮಯಕ್ಕೆ ಸುಬ್ಬು ಹೊರಗಡೆಯಿಂದ ಮನೆಯೊಳಗೇ ಬಂದು ಇದನ್ನೆಲ್ಲಾ ನೋಡಿ ಖುಷಿ ಪಡುತ್ತಿರುತ್ತಾನೆ. ನಂತರ ಶ್ರಾವಣಿ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾಳೆ.

ವಿಜಯ ಹಾಗು ಮದನ್ ಗೆ ಫುಲ್ ಹೊಟ್ಟೆಕಿಚ್ಚು

Vijaya and Madan are talking
Image Credit: ZEE5

ಇದನ್ನೆಲ್ಲಾ ನೋಡಿದ ವಿಜಯ (ವಿಲ್ಲನ್) ಹಾಗು ಅವಳ ಮಗ ಮದನ್ ಮನಸ್ಸಲ್ಲೇ ಸಿಡಿಮಿಡಿಗೊಳ್ಳುತ್ತಾರೆ. ವೀರೇಂದ್ರನಾಥ್ ಹೊರಹೋದ ನಂತರ, ವಿಜಯ ಹಾಗು ಮದನ್ ಇಬ್ಬರು ಈ ವಿಷಯವಾಗಿ ಮಾತನಾಡುತ್ತಾ, ಶ್ರಾವಣಿಯನ್ನು ಅವರ ಅಪ್ಪನಿಂದ ಸಂಪೂರ್ಣವಾಗಿ ದೂರ ಮಾಡುವುದು ಹೇಗೆ ಎಂದು ಆಲೋಚಿಸುತ್ತಾರೆ.

ಸೆಲ್ಫಿ ಫೋಟೋಗಳೆಲ್ಲ ಫುಲ್ ಬ್ಲರ್

All selfies taken by Shravani are blurred
Image Credit: ZEE5

ಶ್ರಾವಣಿ ತನ್ನ ರೂಮ್ ಗೆ ಓಡಿ ಹೋಗಿ ಖುಷಿಯಿಂದ ತೆಲಾಡುತ್ತ ಮೊಬೈಲ್ ಅನ್ನು ಓಪನ್ ಮಾಡಿ ಸೆಲ್ಫಿಗಳನ್ನು ಚೆಕ್ ಮಾಡುತ್ತಾಳೆ ಆದರೆ, ಭಯದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕೈ ಶೇಕ್ ಆಗಿ ಎಲ್ಲ ಫೋಟೋಗಳು ಬ್ಲರ್ ಆಗಿ ಬಂದಿರುತ್ತವೆ. ಫೋಟೋಗಳನ್ನು ನೋಡಿದ ಶ್ರಾವಣಿ ಫುಲ್ ಅಪ್ಸೆಟ್ ಆಗಿ ಬೇಜಾರಾಗುತ್ತಾಳೆ. ಇದೇ ಸಮಯಕ್ಕೆ ಸುಬ್ಬು ಶ್ರಾವಣಿ ರೂಮ್ ಗೆ ಬರುತ್ತಾನೆ ಹಾಗು ಅವನ ಹತ್ತಿರ ಶ್ರಾವಣಿ ಮಾತನಾಡುತ್ತ ಹೇಳುತ್ತಾಳೆ, “ಸುಬ್ಬು ನಾನು ತುಂಬಾ ನತದೃಷ್ಟದವಳು, ಒಂದು ಸೆಲ್ಫಿ ಕೂಡ ಚೆನ್ನಾಗಿ ಬಂದಿಲ್ಲ ಎಲ್ಲ ಬ್ಲರ್ ಆಗಿದೆ ಎಂದು ಹೇಳಿಕೊಂಡು ಅಳುತ್ತಾಳೆ.” ಆದರೆ, ಸುಬ್ಬು ಶ್ರಾವಣಿಯನ್ನು ಸಮಾಧಾನ ಮಾಡುತ್ತಾ ಹೇಳುತ್ತಾನೆ, ಮೇಡಂ ನೀವು ತುಂಬಾ ಅದೃಷ್ಟವಂತ್ರು ಎಂದು ಹೇಳಿ ತನ್ನ ಮೊಬೈಲ್ ನಲ್ಲಿ ತೆಗೆದ ಫೋಟೋ ಒಂದನ್ನು ಶ್ರಾವಣಿಗೆ ತೋರಿಸುತ್ತಾನೆ.

ಶ್ರಾವಣಿ ಸುಬ್ಬುವಿನ ಕೆನ್ನೆಗೆ ಕಿಸ್ ಕೊಟ್ಟೆಬಿಟ್ಟಳು

Shravani kissed Subbu on the cheek
Image Credit: ZEE5

ಶ್ರಾವಣಿ ಅಪ್ಪನ ಜೊತೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಕೆಳಗೆ ಬೀಳುವಾಗ ಅಪ್ಪ ಅವಳನ್ನು ತನ್ನ ತೋಳಿನಲ್ಲಿ ಹಿಡಿದು ಕಾಪಾಡಿದ ದೃಶ್ಯವನ್ನು ಸುಬ್ಬು ತನ್ನ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಂಡಿರುತ್ತಾನೆ. ಆ ಫೋಟೋವನ್ನು ನೋಡಿದ ಶ್ರಾವಣಿಗೆ ಖುಷಿಯ ಎಲ್ಲೆ ಮೀರಿ ಬಿಡುತ್ತದೆ. ಅವಳು ಸಂತೋಷದಿಂದ ಕುಣಿಯುತ್ತಲೇ ಖುಷಿಯ ಮತ್ತಿನಲ್ಲಿ ಸುಬ್ಬುವನ್ನು ತಬ್ಬಿಕೊಂಡು ಅವನ ಕೆನ್ನೆಗೆ ಕಿಸ್ ಕೊಟ್ಟು ಬಿಡುತ್ತಾಳೆ. ಈಗ ಸುಬ್ಬು ಫುಲ್ ಗಾಬರಿ ಮತ್ತು ಸಂತೋಷದಲ್ಲಿ ನಾನು ಎಂತ ಕೆಲಸ ಮಾಡಿದೆ ಎಂದು ಶ್ರಾವಣಿಗೂ ತಿಳಿಯುತ್ತದೆ. ಸುಬ್ಬು ತಕ್ಷಣವೇ ತನ್ನ ಮೊಬೈಲ್ ತೆಗೆದುಕೊಂಡು ರೂಮ್ ನಿಂದ ಹೊರಹೋಗುತ್ತಾನೆ ಅವನಿಗೆ ಏನು ಮಾಡಬೇಕೆ ಎಂದು ತಿಳಿಯುವುದಿಲ್ಲ. ಇತ್ತ ಶ್ರಾವಣಿ ಎಂತ ಕೆಲಸ ಮಾಡಿದೆ ಎಂದು ಖುಷಿ ಹಾಗು ಮುಜುಗರದಿಂದ ಹಣೆಯನ್ನು ಕೈಯಿಂದ ಚಚ್ಚಿಕೊಳ್ಳುತ್ತಾಳೆ.

Similar Posts

Leave a Reply

Your email address will not be published. Required fields are marked *