ತಂದೆಗೆ ಆಪರೇಷನ್ ಮಾಡಿಸಲು ಸಹಾಯ ಕೇಳಿಕೊಂಡು ಬಂದ ಬಡ ಹುಡುಗಿಗೆ 10 ಲಕ್ಷ ರೂ ಚೆಕ್ ನೀಡಿ ಸಂಕಷ್ಟಕ್ಕೆ ಸಿಲುಕಿರುವ ಶ್ರಾವಣಿಗೆ ಅಪ್ಪ ವೀರೇಂದ್ರನಾಥ ದೇಸಾಯಿಯಿಂದ ನಾಳೆ 10 ಗಂಟೆಯೊಳಗೆ 10 ಲಕ್ಷ ಹಣವನ್ನು ವಾಪಸ್ ಕೊಡಬೇಕು ಇಲ್ಲವಾದರೆ ಮನೆಯಿಂದ ಹೊರಹೋಗಬೇಕು ಎಂದು ಆದೇಶ ದೊರಕಿದೆ. ಇದನ್ನು ಬುಧುವಾರದ ಸಂಚಿಕೆಯಲ್ಲಿ ನೋಡಿದ್ದೀರಿ. ಹಾಗೆಯೇ, ಇವತ್ತಿನ ಸಂಚಿಕೆಯಲ್ಲಿ ಏನಾಯಿತು ಎಂದು ನೋಡೋಣ.

shravani subramanya serial may 9th update
Image Credit: ZEE5

ವೀರೇಂದ್ರನಾಥ ದೇಸಾಯಿ ಸೇರಿದಂತೆ ಮನೆಯ ಎಲ್ಲಾ ಸದಸ್ಯರು ಮನೆಯ ಹಾಲ್ ನಲ್ಲಿ ಸೇರಿರುತ್ತಾರೆ ಹಾಗು 10 ಗಂಟೆಯಾಗುವುದನ್ನು ಕಾಯುತ್ತಿರುತ್ತಾರೆ. ನಂತರ ಸರಿಯಾಗಿ 10 ಗಂಟೆಗೆ ಗಡಿಯಾರ ಬೆಲ್ ಬಾರಿಸುತ್ತದೆ ಆಗ ಶ್ರಾವಣಿ ಮಹಡಿ ಮೇಲಿಂದ ಕೆಳಗೆ ಇಳಿದು ಬರುತ್ತಾಳೆ. ಶ್ರಾವಣಿಯನ್ನು ನೋಡಿ ಅವಳು ಮನೆ ಬಿಟ್ಟು ಹೋಗುವುದು ಖಂಡಿತ ಎಂದು ವೀರುವಿನ ಅಕ್ಕ (ವಿಲ್ಲನ್) ಹಾಗು ಅವನ ಮಗನಿಗೆ ಮನಸಲ್ಲೇ ಸಂತೋಷವಾಗುತ್ತಿರುತ್ತದೆ.

ಶ್ರಾವಣಿ ಬಂದ ತಕ್ಷಣ ವೀರು ತನ್ನ ಅಕ್ಕನ ಮುಖಾಂತರ ಶ್ರಾವಣಿಗೆ 10 ಲಕ್ಷ ತಂದಿದೀಯ ಎಂದು ಕೇಳುತ್ತಾನೆ. ಆಗ ಅವಳ ಮುಖ ನೋಡಿದ ವೀರುವಿನ ಅಕ್ಕ ಮನಸ್ಸಿನ್ನಲ್ಲೇ ನಗುತ್ತಾ ಹಣವನ್ನು ತಂದಿಲ್ಲ ಎಂದು ವೀರುಗೆ ತಿಳಿಸುತ್ತಾಳೆ. ನಂತರ, ವೀರು ತನ್ನ ಘನತೆ ಗೌರವಕ್ಕೆ ಶ್ರಾವಣಿ ಧಕ್ಕೆ ತಂದಿದ್ದಾಳೆ ಹಾಗು ಮುಂದೆಯೂ ಧಕ್ಕೆ ತರುತ್ತಾಳೆ ಎಂದು ಹೇಳುತ್ತಾ ಅವನ್ನು ಮನೆಬಿಟ್ಟು ಹೋಗು ಎಂದು ಹೇಳಲು ಮುಂದಾಗಬೇಕು, ಅಷ್ಟರೊಳಗೆ ಹೊರಗಡೆಯಿಂದ ವೀರುವಿನ PA ಬಂದು ಹೊರಗಡೆ ಸಾಕಷ್ಟು ಜನರು ವಿದ್ಯಾ ಮಂತ್ರಿ ಅಂದರೆ ವೀರುವನ್ನು ನೋಡಲೇಬೇಕು ಎಂದು ಬಂದಿದ್ದಾರೆ ಎಂದು ಹೇಳುತ್ತಾನೆ.

shravani subramanya serial may 9th update
Image Credit: ZEE5

ನಂತರ ಹೊರಗಡೆ ಬಂದು ನೋಡಿದಾಗ, ಬಂದಿದ್ದ ಜನರೆಲ್ಲಾ ವೀರೇಂದ್ರನಾಥ ದೇಸಾಯಿಗೆ ಜಯವಾಗಲಿ ಎಂದು ಕೂಗುತ್ತಿರುತ್ತಾರೆ. ಇದನ್ನು ನೋಡಿದ ವೀರುಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ ಹಾಗು ಎಲ್ಲರನ್ನು ಸಮಾಧಾನ ಮಾಡಿ ಏನಾಯಿತು ಎಂದು ಕೇಳುತ್ತಾನೆ. ಆಗ ಬಂದಿದ್ದವರು ನೀವು 10 ನೀಡಿ ನಮ್ಮ ಕಾಲೋನಿಯ ಮಂಜುನಾಥ ರವರ ಜೀವನನ್ನು ಕಾಪಾಡಿದ್ದೀರಾ ನಿಮ್ಮಂತಹ ಜನನಾಯಕರು ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಹೇಳುತ್ತಾರೆ. ಅಷ್ಟರೊಳಗೆ, ವೀರುಗೆ ತಿಳಿಯುತ್ತದೆ, ಶ್ರಾವಣಿ ಕೊಟ್ಟ 10 ಲಕ್ಷದ ಚೆಕ್ ಈ ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಿದೆ ಎಂದು.

shravani subramanya serial may 9th update
Image Credit: ZEE5

ಈ ರೀತಿಯಾಗಿ ಜನರ ಬೆಂಬಲ ನೋಡಿ ಮುಖ್ಯಮಂತ್ರಿಗಳು ಸಹ ವೀರುಗೆ ಕಾಲ್ ಮಾಡಿ ವಿಶ್ ಮಾಡುತ್ತಾರೆ. ಇದನ್ನೆಲ್ಲಾ ನೋಡಿದ ವೀರುಗೆ ತಾನು ಏನೂ ಮಾಡದೆ ನನಗೆ ಇಷ್ಟೊಂದು ಪ್ರಶಂಸೆ ದೊರೆಯುತ್ತಿದೆ ಎಂದು ಸುಬ್ಬು ಹತ್ತಿರ ಹೇಳುತ್ತಾನೆ ಮತ್ತು ಈ ವಿಷಯ ಇಷ್ಟು ದೊಡ್ಡದಾಗಿ ಸದ್ದು ಮಾಡುತ್ತಿರುವುದಕ್ಕೆ ನೀನೆ ಕಾರಣ ಎಂದು ಸುಬ್ಬುಗೆ ಹೇಳುತ್ತಾನೆ. ಸುಬ್ಬು ಇದೆ ಒಳ್ಳೆಯ ಸಮಯ ಎಂದು ಭಾವಿಸಿ, ವೀರುಗೆ ಹೇಳುತ್ತಾನೆ, “ಯಜಮಾನರೇ ನಿಮಗೆ ಏನು ಮಾಡದೆ ಇಷ್ಟೆಲ್ಲಾ ಪ್ರಶಂಸೆ ಸಿಗುತ್ತಿದೆ ಎಂದು ಗಿಲ್ಟಿ ಫೀಲ್ ಆಗುತ್ತಿದ್ದರೆ, ಶ್ರಾವಣಿಯವರು ನಿಮ್ಮ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಿ.” ಇದಕ್ಕೆ ವೀರು ಒಪ್ಪಿಗೆ ಸೂಚಿಸುತ್ತಾನೆ.

shravani subramanya serial may 9th update
Image Credit: ZEE5

ಈ ಖುಷಿಯ ವಿಷಯನ್ನು ಸುಬ್ಬು ಬಂದು ಶ್ರಾವಣಿಗೆ ಹೇಳುತ್ತಾನೆ, ಇದನ್ನು ಕೇಳಿದ ಶ್ರಾವಣಿ ಫುಲ್ ಖುಷ್ ಆಗುತ್ತಾಳೆ. ಒಟ್ಟಿನಲ್ಲಿ ಶ್ರಾವಣಿ ಮಾಡಿದ ಸಹಾಯಕ್ಕೆ ಅಪ್ಪನಾದ ವೀರುಗೆ ರಾಜಕೀಯವಾಗಿ ಉತ್ತಮ ಪ್ರಶಂಸೆ ದೊರೆಯಿತು ಹಾಗು ಶ್ರಾವಣಿಗೂ ಅಪ್ಪನ ಜೊತೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ದೊರೆಯಿತು.

Similar Posts

Leave a Reply

Your email address will not be published. Required fields are marked *