ಶ್ರಾವಣಿಯನ್ನು ಅವಳ ಅಪ್ಪನಿಂದ ದೂರ ಮಾಡಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದ ಕಾರಣ, ವಿಜಯ ಮತ್ತು ಮದನ್ ಫುಲ್ ಟೆನ್ಶನ್ ಆಗಿದ್ದಾರೆ. ಮುಂದೆ ಏನ್ ಮಾಡಬೇಕು ಎಂದು ತಿಳಿಯದೆ ಮದನ್ ಎಣ್ಣೆ ಹೊಡೆಯುತ್ತಾ ತನ್ನ ರೂಮ್ ನಲ್ಲಿ ಇರುತ್ತಾನೆ, ಅದೇ ಸಮಯಕ್ಕೆ ಬಂದ ಅಮ್ಮ ವಿಜಯ ಕೋಪದಿಂದಲೇ ಮಗನಿಂದ ಡ್ರಿಂಕ್ಸ್ ಬಾಟಲಿಯನ್ನು ಕಸಿದುಕೊಳ್ಳುತ್ತಾಳೆ.

ಅಷ್ಟೇ ಅಲ್ಲದೆ, ನೀನು ಹೇಳಿದ ಕೆಲಸ ಒಂದೂ ಸರಿಯಾಗಿ ಮಾಡಿಲ್ಲ, ಸುಬ್ಬುನ ಕೊಲ್ಲಲು ಮಾಡಿದ ಪ್ರಯತ್ನ ಫೇಲ್ ಆಯ್ತು, ಶ್ರಾವಣಿಯನ್ನು ಅಪ್ಪನಿಂದ ದೂರ ಮಾಡಲು ಆಗುತ್ತಿಲ್ಲ. ನಿನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದೇ ನನ್ನ ತಪ್ಪಾಯಿತು, ನೀನು ಮೊದಲು ಇಲ್ಲಿಂದ ವಾಪಸ್ ಹೋಗು ಎಂದು ವಿಜಯ ಮದನ್ ಗೆ ಹೇಳುತ್ತಾಳೆ.

ವೀರೇಂದ್ರನಾಥ್ ನನ್ನು ಕೊಲ್ಲುವ ಮಾತನಾಡಿದ ಮದನ್

Madhan plans to kill Shravani's father - Shravani Subramanya Serial Update
Image Credit: ZEE5

ಅಮ್ಮನ ಮಾತುಗಳನ್ನು ಕೇಳಿದ ಮದನ್ ಸಿಟ್ಟಿನಿಂದ ಹೇಳುತ್ತಾನೆ, “ಅಮ್ಮ ನಾನು ಮಾಡೋ ಕೆಲಸ ಸರಿಯಾಗಿ ಮಾಡ್ತಾ ಇದೀನಿ ಆದರೆ ಏನ್ ಮಾಡ್ಲಿ ಪ್ರತಿ ಸಲ ಯಾರಾದ್ರೂ ಅಡ್ಡ ಬಂದು ನಮ್ಮ ಪ್ಲಾನ್ ಎಲ್ಲ ಫೇಲ್ ಆಗ್ತಾ ಇದಾವೆ. ಅದಕ್ಕೆ ನಾನು ಒಂದು ಪ್ಲಾನ್ ಮಾಡಿದಿನಿ, ನಾವು ಸುಮ್ನೆ ರೆಂಬೆ ಕೊಂಬೆಗಳನ್ನು ಕಡಿದರೆ ಟೆಂಪರರಿ ಸೊಲ್ಯೂಷನ್ ಅಷ್ಟೇ, ಅದಕ್ಕೆ ಬುಡವನ್ನೇ ಕಡಿಯಬೇಕು. ನಾನು ಡಿಸೈಡ್ ಮಾಡಿದಿನಿ ವೀರೇಂದ್ರನಾಥ ದೇಸಾಯಿನೇ ಕೊಲೆ ಮಾಡ್ಬೇಕು ಆವಾಗ ಎಲ್ಲದಕ್ಕೂ ಸೊಲ್ಯೂಷನ್ ಸಿಗುತ್ತೆ ಮತ್ತು ನಾವ್ ಅಂದ್ಕೊಂಡಿರೋ ಕೆಲಸ ಆಗುತ್ತೆ. ಮಗನ ಈ ಮಾತುಗಳನ್ನ ಕೇಳಿದ ವಿಜಯಾಗೆ ಫುಲ್ ಶಾಕ್ ಆಗುತ್ತದೆ.

ಓಂ ಪಿಕ್ಚರ್ ಸತ್ಯನಂತಾದ ಸುಬ್ಬು

Shravani asking Subbu to unlock the car door - Shravani Subramanya Serial Kannada
Image Credit: ZEE5

ಶ್ರಾವಣಿ ಮತ್ತು ಅವಳ ಅಪ್ಪನ ಫೋಟೋ ತೆಗೆದ ಕಾರಣ ಶ್ರಾವಣಿ ಖುಷಿಯಲ್ಲಿ ಮೈಮರೆತು ಸುಬ್ಬುವಿನ ಕೆನ್ನೆಗೆ ಕಿಸ್ ಕೊಟ್ಟುಬಿಟ್ಟಳು. ಇದಾದ ಬಳಿಕ ಸುಬ್ಬುಗೆ ದಿಗ್ಭ್ರಮೆಯಂತಾಗಿದೆ ಯಾರು ಕೂಗಿದರು ತಿರುಗುತ್ತಿಲ್ಲ, ಮಾತನಾಡುತ್ತಿಲ್ಲ. ಶ್ರಾವಣಿ ರೂಮ್ನಿಂದ ಸುಮ್ಮನೆ ಹೊರಟ ಸುಬ್ಬು ಆಚೆ ಬಂದು ಕಾರ್ ಹತ್ತಿ ಸ್ಟಾರ್ಟ್ ಮಾಡಿಕೊಂಡು ಹೊರಟೇ ಬಿಟ್ಟನು.

ಶ್ರಾವಣಿಯನ್ನು ಸಹ ಕಾಲೇಜಿಗೆ ಡ್ರಾಪ್ ಮಾಡುವುದು ಮರೆತು ಬಿಟ್ಟನು, ಶ್ರಾವಣಿ ಓಡಿ ಬಂದು ಎಷ್ಟು ಕೂಗಿದರು ಸುಬ್ಬು ಯಾವುದೋ ಲೋಕದಲ್ಲಿ ಇರುವಂತೆ ಕಾರ್ ಅಲ್ಲಿ ಹೊರಟುಹೋದನು. ಈ ಎಪಿಸೋಡ್ ಅನ್ನು ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಶ್ರಾವಣಿ ಕಿಸ್ ಮಾಡಿದ ನಂತರ ಶಿವರಾಜ್ ಕುಮಾರ್ ಅಭಿನಯದ ಓಂ ಚಿತ್ರದಲ್ಲಿ ನಟಿ ಪ್ರೇಮ ಶಿವರಾಜ್ಕುಮಾರ್ ಗೆ ಕಿಸ್ ಕೊಟ್ಟಾಗ ಶಿವಣ್ಣ ಆಗಿದ್ದ ಪರಿಸ್ಥಿತಿಗೆ ಈಗ ಸುಬ್ಬು ಕೂಡ ತಲುಪಿದ್ದಾನೆ ಎಂದು ಕಾಮೆಂಟ್ ಹಾಕಿದ್ದಾರೆ.

Similar Posts

Leave a Reply

Your email address will not be published. Required fields are marked *