Shravani Subramanya: ಶ್ರಾವಣಿ ನನ್ನ ಮಗಳೇ ಅಲ್ಲ ಎಂದ ವೀರೇಂದ್ರನಾಥ ದೇಸಾಯಿ

ಸೀಕ್ರೆಟ್ ರೂಮಿನಲ್ಲಿ ಸಿಕ್ಕ ಅಪ್ಪನ ಹಳೆಯ ಪತ್ರಗಳನ್ನು ಓದಿದ ಶ್ರಾವಣಿಗೆ ದೊಡ್ಡ ಪ್ರಶ್ನೆಯೊಂದು ಕಾಡುತ್ತಿದೆ. ನಾನು ಚಿಕ್ಕವಳಿದ್ದಾಗ ನನ್ನನ್ನು ಅಪ್ಪ ಇಷ್ಟೊಂದು ಪ್ರೀತಿಸುತ್ತಿದ್ದರು ಆದರೆ ಈಗ ಯಾಕೆ ನನ್ನನ್ನು ಕಂಡರೆ ದ್ವೇಷಿಸುತ್ತಿದ್ದಾರೆ ಎಂದು ಶ್ರಾವಣಿ ಯೋಚಿಸುತ್ತಾ ರಾತ್ರಿ ಮಲಗಿ ಬಿಡುತ್ತಾಳೆ. ಆ ಸೀಕ್ರೆಟ್ ರೂಮಿನಿಂದ ತಂದ ಪತ್ರಗಳಲ್ಲಿ ಒಂದು ಪತ್ರ ಬೆಳಿಗ್ಗೆ ಜೋರಾಗಿ ಗಾಳಿ ಬೀಸಿದ ಪರಿಣಾಮ ಹಾರಿಕೊಂಡು ಹೋಗಿ ವೀರೇಂದ್ರನಾಥ ಬರುವ ಜಾಗದಲ್ಲಿ ಬಂದು ನೆಲದ ಮೇಲೆ ಬೀಳುತ್ತದೆ.

Veerendranatha shocked by seeing his old letter
Image Credit: ZEE5

ವೀರೇಂದ್ರನಾಥ ದೇಸಾಯಿ ಬೆಳಿಗ್ಗೆ ಸ್ನಾನ ಮಾಡಲು ಬರುವಾಗ ಆ ಪತ್ರವು ಅವನ ಕಣ್ಣಿಗೆ ಕಾಣಿಸುತ್ತದೆ. ಪತ್ರವನ್ನು ನೋಡಿದ ಕೂಡಲೇ ಜೋರಾಗಿ ಅಕ್ಕ ಅಕ್ಕ ಎಂದು ವೀರೇಂದ್ರನಾಥ ಕೂಗುತ್ತಾನೆ. ಶ್ರಾವಣಿಯು ಸೇರಿದಂತೆ ಮನೆಯವರೆಲ್ಲಾ ಏನಾಯಿತು ಎಂದು ಗಾಬರಿಯಿಂದ ವೀರು ಬಳಿ ಬರುತ್ತಾರೆ. ಆಗ ವೀರೇಂದ್ರನಾಥ ಶ್ರಾವಣಿಗೆ, ನಾನು ನೆಮ್ಮದಿಯಾಗಿರೋದು ನಿನಗೆ ಇಷ್ಟ ಇಲ್ವಾ ಹಾಗು ಯಾಕೆ ಈ ರೀತಿ ಹಳೆ ನೆನಪುಗಳನ್ನ ನನಗೆ ಮತ್ತೆ ಮತ್ತೆ ನೆನಪು ಮಾಡುತ್ತಿದ್ದೀಯ ಎಂದು ನೇರವಾಗಿ ಕೇಳಿಬಿಡುತ್ತಾನೆ.

ಅಪ್ಪನ ಮುಂದೆ ಕಣ್ಣೀರ ಧಾರೆ ಹರಿಸಿದ ಶ್ರಾವಣಿ

ಅಪ್ಪನ ಮಾತಿಗೆ ಉತ್ತರ ಕೊಡುವ ಶ್ರಾವಣಿ, “ಯಾಕ್ ಅಪ್ಪ ನೀವು ನನ್ನ ಇಷ್ಟೊಂದು ದ್ವೇಷ ಮಾಡ್ತೀರಾ? ನಾನು ಚಿಕ್ಕವಳಿದ್ದಾಗ ನನಿಗೋಸ್ಕರ ಪ್ರೀತಿಯಿಂದ ಎಷ್ಟೊಂದು ಪತ್ರಗಳನ್ನ ಬರೆದಿದ್ದೀರಾ, ಎಷ್ಟೊಂದು ಉಡುಗೊರೆಗಳನ್ನ ತಂದಿದ್ದೀರಾ ಆದರೆ ಈಗ ಯಾಕೆ ನನ್ನ ಮೇಲೆ ದ್ವೇಷ ಮಾಡ್ತೀರಾ? ನಾನೇನ್ ಅಂತ ತಪ್ಪು ಮಾಡಿದೀನಿ ಅಂತಾನಾದ್ರು ಹೇಳಿ ಅಪ್ಪ” ಎಂದು ಅಳುತ್ತಾ ವೀರೇಂದ್ರನಾಥನ ಕಾಲಿಗೆ ಬೀಳುತ್ತಾಳೆ.

Shravani crying
Image Credit: ZEE5

ಪ್ರತೀ ಕ್ಷಣ ಅಪ್ಪನ ಪ್ರೀತಿಗೆ ಕಾಯ್ತಾ ಇದೀನಿ ನಾನು ಅಕಸ್ಮಾತ್ ನಿಮಗೆ ಆ ಪ್ರೀತಿ ಕೊಡೋಕೆ ಸಾಧ್ಯ ಆಗಲ್ಲ ಅನ್ನೋದಾದ್ರೆ, ಯಾವ ಕಾರಣಕ್ಕೆ ನನ್ನನ್ನ ದ್ವೇಷ ಮಾಡ್ತಿದ್ದೀರಾ ಅಂತ ಹೇಳಿ ಮತ್ತೆ ಅದೇ ಕ್ಷಣ ನನ್ನನ್ನ ಸಾಯುಸ್ಬಿಡಿ ಅಪ್ಪ, ಅಪ್ಪನ ಪ್ರೀತಿ ಸಿಗದೇ ಇರೋ ಈ ಜೀವನ ಬೇಡ ನನಿಗೆ ಎಂದು ಕಣ್ಣೀರ ಧಾರೆಯನ್ನೇ ಶ್ರಾವಣಿ ಹರಿಸುತ್ತಾಳೆ.

ಶ್ರಾವಣಿ ನನ್ನ ಮಗಳೇ ಅಲ್ಲ ಎಂದ ವೀರು

ಶ್ರಾವಣಿಯ ಈ ನೋವಿನ ಮಾತುಗಳನ್ನು ಕೇಳಿದ ವೀರೇಂದ್ರನಾಥ ಏನು ಮಾತನಾಡದೇ ತನ್ನ ರೂಮಿಗೆ ಹೋಗಿ ಯೋಚಿಸುತ್ತಾ ಮಂಚದ ಮೇಲೆ ಕುಳಿತು ಬಿಡುತ್ತಾನೆ. ಅನಂತರ ಅಲ್ಲಿಗೆ ಅವನ ಅಕ್ಕ ವಿಜಯಾಂಬಿಕೆ ಬರುತ್ತಾಳೆ ಹಾಗು ಬಂದವಳೇ ತನ್ನ ನಾಟಕದ ಮಾತುಗಳನ್ನು ಮುಂದುವರೆಸುತ್ತಾಳೆ. “ನಿನ್ನನ್ನ ಯಾಕೆ ಶ್ರಾವಣಿ ಅರ್ಥ ಮಾಡ್ಕೋತ ಇಲ್ಲ? ಅವಳಿಗೆ ಏನಾಗಿದೆ? ಯಾಕೆ ನಿನ್ನ ಮನಸಿಗೆ ಯಾವಾಗಲೂ ನೋವು ಕೊಡೊ ಕೆಲ್ಸನೆ ಮಾಡ್ತಾಳೆ? ಎಂದು ಅನುಕಂಪದ ಮಾತುಗಳನ್ನು ವಿಜಯಂಬಿಕೆ ವೀರುಗೆ ಹೇಳುತ್ತಾಳೆ.”

Veerendranatha and Vijayambike discussing
Image Credit: ZEE5

ಆಗ ಮಾತನಾಡುವ ವೀರೇಂದ್ರನಾಥ, “ನಾನು ಮನುಷ್ಯನೇ ಅಲ್ವಾ ಅಕ್ಕ? ನಂಗು ಮನಸ್ಸು ಅನ್ನೋದು ಇದೆ ಅದುಕ್ಕು ನೋವಾಗುತ್ತೆ, ಪ್ರತೀ ಕ್ಷಣ ಕಲ್ಲಂತೆ ಇರಕ್ಕೆ ಆಗಲ್ಲ ನನಿಗೆ ಎಂದು ಹೇಳುತ್ತಾನೆ. ಯಾಕೆ ನನ್ನನ್ನ ದ್ವೇಷ ಮಾಡ್ತೀರಾ ಅಂತ ಶ್ರಾವಣಿ ಕೇಳ್ತಾಳೆ ಆದರೆ ಅವಳಿಗೆ ಹೇಗೆ ಹೇಳಲಿ ನಾನು, ಅವಳು ನನ್ನ ರಕ್ತ ಅಲ್ಲ, ನನ್ನ ಸ್ವಂತ ಮಗಳು ಅಲ್ಲ ಅಂತ,” ಎಂದು ಅಕ್ಕನಿಗೆ ವೀರು ಹೇಳುತ್ತಾನೆ.

ಈ ಮಾತುಗಳನ್ನು ಕೇಳಿದ ವಿಜಯಂಬಿಕೆಗೆ ಮನಸ್ಸಿನಲ್ಲಿ ಖುಷಿಯಾಗುತ್ತದೆ ಕಾರಣ ಅವಳು ಮಾಡಿದ ಒಳಸಂಚು ಹಾಗು ಸುಳ್ಳುಗಳನ್ನು ವೀರೇಂದ್ರನಾಥ ಬಹಳವಾಗಿ ನಂಬಿದ್ದಾನೆ ಮತ್ತು ನನ್ನ ಪ್ರಯತ್ನಕ್ಕೆ ಒಳ್ಳೆ ಸಮಯ ಬಂದಿದೆ ಎಂದು ತನ್ನ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ.

Similar Posts

Leave a Reply

Your email address will not be published. Required fields are marked *