Shravani Subramanya: ಶ್ರಾವಣಿಗೆ ಕುಡಿದ ಹಾಲಿಗೆ ನಿದ್ದೆ ಮಾತ್ರೆ ಹಾಕಿದ ಮದನ್

ಶ್ರಾವಣಿಗೆ ಈ ದಿನ ಎಕ್ಸಾಮ್ ಇದೆ, ಅವಳಿಗೆ ಕೇವಲ ಒಂದು ಎಕ್ಸಾಮ್ ಅಲ್ಲ, ತನ್ನ ಅಪ್ಪನ ಪ್ರೀತಿ ಗಳಿಸಲು ಇರುವ ಕೊನೆಯ ಅವಕಾಶ ಎಂದು ಭಾವಿಸಿದ್ದಾಳೆ ಹಾಗು ಅದು ನಿಜವೂ ಹೌದು. ಅದಕ್ಕಾಗಿಯೇ ರಾತ್ರಿಯೆಲ್ಲ ಓದಿ ಬೆಳಿಗ್ಗೆ ಎದ್ದು ದೇವರ ಮಾಡಿ, ದೇವರ ಮುಂದೆ ತಾನು ಎಕ್ಸಾಮ್ ಚೆನ್ನಾಗಿ ಬರೆಯುವಂತೆ ಆಶೀರ್ವಾದ ಮಾಡು ಅಂತ ಕೇಳಿಕೊಳ್ಳುತ್ತಾನೆ.

ಅದೇ ಸಮಯಕ್ಕೆ ಅಲ್ಲಿಗೆ ಶ್ರಾವಣಿಯ ಚಿಕ್ಕಮ್ಮ ಬರುತ್ತಾರೆ, ಅವರಿಗೂ ದೇವರ ಮಂಗಳಾರತಿ ನೀಡುವ ಉದ್ದೇಶದಿಂದ ದೇವರ ಕೋಣೆಯಿಂದ ಆರತಿ ತಟ್ಟೆಯನ್ನು ಹಿಡಿದು ಹೊರಬರುತ್ತಾಳೆ. ಆದರೆ, ಅವಳು ಆಚೆ ಬಂದ ತಕ್ಷಣ ಅವಳಿಗೆ ಅಡ್ಡವಾಗಿ ಅಪ್ಪ ವೀರೇಂದ್ರನಾಥ ಅಚಾನಕ್ ಆಗಿ ಬಂದು ನಿಲ್ಲುತ್ತಾನೆ. ಇಬ್ಬರೂ ಒಬ್ಬರನ್ನು ಒಬ್ಬರು ನೋಡಿಕೊಂಡು ಸುಮ್ಮನೆ ಆಗುತ್ತಾರೆ. ನಂತರ ವೀರೇಂದ್ರನಾಥ ಏನು ಮಾತನಾಡದೆ ಅಲ್ಲಿಂದ ಹೊರಡಲು ಮುಂದಾಗುತ್ತಾನೆ.

Shravani and Veerendranatha
Image Credit: ZEE5

ಅಪ್ಪನಿಗೆ ತಾನೇ ಆರತಿ ನೀಡಿದ ಶ್ರಾವಣಿ

ಆದರೆ ಶ್ರಾವಣಿ ದೇವರಿಗೆ ಆರತಿ ಆಗಿದೆ ಮಂಗಳಾರತಿ ತಗೋಬಹುದಲ್ವಾ ಎಂದು ಕೇಳುತ್ತಾಳೆ. ಶ್ರಾವಣಿಯ ಮಾತಿಗೆ ಏನು ಮಾತನಾಡದೆ ಆರತಿ ತೆಗೆದುಕೊಳ್ಳಲು ಮುಂದಾಗುವ ವೀರೇಂದ್ರನಾಥನ ಬಲಗೈ ಗಾಯವಾಗಿರುವ ಕಾರಣ ಆರತಿಯ ಶಾಖವು ಅವನ ಕೈಯನ್ನು ಸುಡುತ್ತದೆ. ಆಗ ಶ್ರಾವಣಿಯೇ ತನ್ನ ಕೈಯಿಂದ ವೀರೇಂದ್ರನಾಥನ ಹಣೆಗೆ ಆರತಿಯನ್ನು ನೀಡುತ್ತಾಳೆ. ಇದನ್ನು ಮನೆಯ ಎಲ್ಲರೂ ನೋಡುತ್ತಿದ್ದಾರೆ ಹಾಗು ಅವರಲ್ಲಿ ವಿಜಯಾಂಬಿಕೆ ಮತ್ತು ಮದನ್ ಈ ಘಟನೆಯನ್ನು ನೋಡಿ ಮನಸ್ಸಿನಲ್ಲಿಯೇ ಕೋಪಗೊಳ್ಳುತ್ತಾರೆ.

ಶ್ರಾವಣಿಗೆ ಬ್ಲಾಂಕೆಟ್ ಹೊದಿಸಿದ್ದು ವೀರೇಂದ್ರನಾಥ ಎಂದು ತಿಳಿದ ಸುಬ್ಬು

ನಂತರ ಸುಬ್ಬು ಶ್ರಾವಣಿಯನ್ನು ಎಕ್ಸಾಮ್ ಗೆ ಕರೆದುಕೊಂಡು ಹೋಗಲು ಮನೆಗೆ ಬರುತ್ತಾನೆ. ಆ ಸಮಯದಲ್ಲಿ ವೀರೇಂದ್ರನಾಥ ಮತ್ತು ಮನೆಯವರೆಲ್ಲ ತಿಂಡಿ ತಿನ್ನುತ್ತಿರುತ್ತಾರೆ. ರಾತ್ರಿ ಶ್ರಾವಣಿ ಓದುತ್ತಾ ಹಾಲ್ ನ ಸೋಫಾದ ಮೇಲೆಯೇ ಮಲಗಿರುವಾಗ ವೀರೇಂದ್ರನಾಥನೇ ಬ್ಲಾಂಕೆಟ್ ಅನ್ನು ಹೊದಿಸಿದ ವಿಷಯ ಸುಬ್ಬುಗೆ ತಿಳಿಯುತ್ತದೆ. ಅಲ್ಲಿಂದ ತಕ್ಷಣ ಶ್ರಾವಣಿ ರೂಮಿಗೆ ಬಂದು ಈ ವಿಷಯವನ್ನು ಶ್ರಾವಣಿಗೆ ಸುಬ್ಬು ಹೇಳುತ್ತಾನೆ ಹಾಗು ತನಗೆ ಬ್ಲಾಂಕೆಟ್ ಹೊದಿಸಿದ್ದು ಕನಸಿನಲ್ಲಿ ಬಂದ ದೇವರಲ್ಲ ನನ್ನ ನಿಜವಾದ ತಂದೆ ಎಂದು ಖುಷಿ ಪಡುತ್ತಾಳೆ.

ಎಕ್ಸಾಮ್ ಬರೆಯಲು ಅಪ್ಪ ಬಳಸುವ ಪೆನ್ ಅನ್ನು ಪಡೆದುಕೊಂಡ ಶ್ರಾವಣಿ

ಎಕ್ಸಾಮ್ ಗೆ ಟೈಮ್ ಆಗುತ್ತೆ ಬೇಗ ಹೊರಡಿ ಮೇಡಂ ಎಂದು ಸುಬ್ಬು ಶ್ರಾವಣಿ ಇಬ್ಬರು ಮೇಲಿನ ರೂಮಿನಿಂದ ಕೆಳಗೆ ಬರುತ್ತಾರೆ. ಅಲ್ಲಿ ವೀರೇಂದ್ರನಾಥ ಕೆಲವು ಫೈಲ್ಸ್ ಗಳಿಗೆ ಸೈನ್ ಹಾಕುತ್ತ ಹಾಲ್ ನಲ್ಲಿ ಕುಳಿತಿರುತ್ತಾನೆ ಹಾಗು ಅವನ ಜೊತೆ ವಿಜಯ ಕೂಡ ಪಕ್ಕದ ಸೋಫಾದಲ್ಲಿ ಕುಳಿತಿರುತ್ತಾಳೆ. ಅಲ್ಲಿಗೆ ಬಂದ ಸುಬ್ಬು “ಯಜಮಾನರೇ, ಶ್ರಾವಣಿ ಮೇಡಂ ನ ಎಕ್ಸಾಮ್ ಗೆ ಬಿಡಕ್ಕೆ ಹೋಗ್ತಾ ಇದಿನಿ” ಎಂದು ಹೇಳುತ್ತಾನೆ. ಇದಕ್ಕೆ ವೀರೇಂದ್ರನಾಥ ಸರಿ ಹೋಗ್ ಬಿಟ್ಟು ಬಾ ಎಂದು ಹೇಳುತ್ತಾನೆ.

Shravani Takes Blessing from Her Father
Image Credit: ZEE5

ನಂತರ, ಸುಬ್ಬು ಅಲ್ಲಿಯೇ ಒಂದು ಸಣ್ಣ ಪ್ಲಾನ್ ಮಾಡಿ, ಶ್ರಾವಣಿಗೆ ಎಕ್ಸಾಮ್ ಬರೆಯಲು ವೀರೇಂದ್ರನಾಥ ಬಳಸುವ ಪೆನ್ ಅನ್ನು ವೀರುನಿಂದಲೇ ಪಡೆದುಕೊಳ್ಳುತ್ತಾನೆ. ಇದರ ಜೊತೆಗೆ ಶ್ರಾವಣಿ ತನ್ನ ಅಪ್ಪನ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆಯಲು ಸಹ ಸುಬ್ಬು ಸಹಾಯ ಮಾಡುತ್ತಾನೆ.

ಶ್ರಾವಣಿ ಕುಡಿದ ಹಾಲಿಗೆ ನಿದ್ದೆ ಮಾತ್ರೆ ಹಾಕಿದ ಮದನ್

ತಿಂಡಿ ತಿಂದರೆ ಎಕ್ಸಾಮ್ ಬರೆಯುವಾಗ ನಿದ್ದೆ ಬರುತ್ತೆ ಎಂದು ಹೇಳಿದ ಶ್ರಾವಣಿಗೆ ಆಕೆಯ ಚಿಕ್ಕಮ್ಮ ಒಂದು ಲೋಟ ಹಾಲು ಕೊಡಲು ಮುಂದಾಗುತ್ತಾಳೆ. ಇದೆ ಉತ್ತಮ ಸಮಯ ಎಂದು ತಿಳಿದ ಮದನ್, ಆ ಹಾಲಿಗೆ ಒಂದು ನಿದ್ದೆ ಮಾತ್ರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಯಾರಿಗೂ ತಿಳಿಯದಂತೆ ಅಲ್ಲಿಂದ ಹೊರಟು ಬಿಡುತ್ತಾನೆ.

ಪಾಪ ಶ್ರಾವಣಿಗೆ ಹಾಲು ನೀಡುವ ಚಿಕ್ಕಮ್ಮನಿಗೂ ಇದು ತಿಳಿಯುವುದಿಲ್ಲ ನಂತರ ಆ ಹಾಲನ್ನು ತಂದು ಶ್ರಾವಣಿಗೆ ಇದನ್ನು ಕುಡಿದು ಎಕ್ಸಾಮ್ ಗೆ ಹೋಗು ಎಂದು ಹೇಳುತ್ತಾಳೆ. ಶ್ರಾವಣಿ ಬೇಡ ಎಂದರು ಅಲ್ಲೇ ಕುಳಿತಿದ್ದ ವಿಜಯಾಂಬಿಕೆ ಒತ್ತಾಯಿಸಿ ಕುಡಿಯಲು ಹೇಳುತ್ತಾಳೆ. ಪಾಪ ಶ್ರಾವಣಿ ಆ ಹಾಲನ್ನು ಪೂರ್ತಿಯಾಗಿ ಕುಡಿದು ಎಕ್ಸಾಮ್ ಗೆ ಸುಬ್ಬು ಜೊತೆ ಹೊರಟು ಬಿಡುತ್ತಾಳೆ. ಅಲ್ಲಿಗೆ ವಿಜಯಾಂಬಿಕೆ ಮತ್ತು ಮದನ್ ಮಾಡಿದ ಪ್ಲಾನ್ ವರ್ಕೌಟ್ ಆಗುತ್ತದೆ.


Similar Posts

Leave a Reply

Your email address will not be published. Required fields are marked *