Shravani Subramanya: ಅಪ್ಪ ಬರೆದ ಪತ್ರ ಓದಿದ ಶ್ರಾವಣಿಗೆ ಕಾದಿತ್ತು ಶಾಕ್

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಹೊಸ ತಿರುವು ಸೃಷ್ಠಿಯಾಗಿದೆ. ಹೌದು, ತಂದೆ ನನ್ನನ್ನು ಕೇವಲ ದ್ವೇಷಿಸುತ್ತಾರೆ ಎಂದು ನಂಬಿರುವ ಶ್ರಾವಣಿಗೆ ಒಂದು ಪತ್ರದ ಮೂಲಕ ಆರಂಭದಲ್ಲಿ ತಂದೆ ನನ್ನನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬ ವಿಷಯ ತಿಳಿಯುವಂತಾಗಿದೆ.

ದೊಡ್ಡಮ್ಮ ವಿಜಯಂಬಿಕೆಯ ಸಂಚಿನಿಂದ ಒಂದೇ ಮನೆಯಲ್ಲಿ ಇದ್ದರೂ ಪರಸ್ಪರ ಮಾತನಾಡದೆ ದೂರವಾಗಿರುವ ಅಪ್ಪ ವೀರೇಂದ್ರನಾಥ ಮತ್ತು ಮಗಳು ಶ್ರಾವಣಿಯ ಕಥಾಹಂದರ ವೀಕ್ಷಕರನ್ನು ಮನರಂಜಿಸುತ್ತಿದೆ. ತನ್ನ ಚಿಕ್ಕವಯಸ್ಸಿನಿಂದಲೂ ಅಪ್ಪನ ಪ್ರೀತಿಯನ್ನು ಬಯಸುತ್ತಿರುವ ಶ್ರಾವಣಿಗೆ ಕೇವಲ ಅಪ್ಪನ ದ್ವೇಷ ಮಾತ್ರ ಸಿಗುತ್ತಿದೆ, ಹಾಗೆಯೇ ಅಕ್ಕನ ಒಳಸಂಚು ಅರಿಯದ ವೀರೇಂದ್ರನಾಥ ಮಗಳನ್ನು ಹಾಗು ಅವಳ ಅಮ್ಮನನ್ನು ದ್ವೇಷಿಸುತ್ತಾನೆ ಹಾಗು ಅವರ ಹಳೆಯ ನೆನಪುಗಳನ್ನು ಸಹ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ.

ಶ್ರಾವಣಿಗೆ ಸೀಕ್ರೆಟ್ ರೂಮಿನ ವಿಷಯ ತಿಳಿಯುತ್ತದೆ

Shravani find a key of secret store room
Image Credit: ZEE5

ಮನೆಯ ಒಂದು ರೂಮಿನಲ್ಲಿ ಈ ಮನೆಯಲ್ಲಿ ಯಾರಿಗೂ ಬೇಡದ ವಸ್ತುಗಳು ಇವೆ ಎಂದು ವಿಜಾಯಂಬಿಕೆ ತನ್ನ ಮಗನಿಗೆ ಹೇಳುವುದನ್ನು ಶ್ರಾವಣಿ ಕೇಳಿಸಿಕೊಳ್ಳುತ್ತಾಳೆ. ಮನೆಯಲ್ಲಿ ಯಾರಿಗೂ ಬೇಡ ವ್ಯಕ್ತಿಯೆಂದರೆ ನಾನು ಮಾತ್ರ ಮತ್ತು ಆ ರೂಮಿನಲ್ಲಿರುವ ವಸ್ತುಗಳು ಸಹ ಯಾರಿಗೂ ಬೇಡದವರಿಗೆ ಸಂಭಂದಿಸಿದ್ದು ಎಂದಾದರೆ, ಖಂಡಿತ ಅದು ನನಗೆ ಸಂಬಂಧಪಟ್ಟ ವಸ್ತುಗಳೇ ಆಗಿರುತ್ತವೆ ಎಂದು ಅಂದುಕೊಳ್ಳುವ ಶ್ರಾವಣಿ, ಹೇಗಾದರೂ ಮಾಡಿ ಆ ರೂಮಿನೊಳಗೆ ಇರುವ ವಸ್ತುಗಳನ್ನು ನೋಡಲೇಬೇಕು ಎಂದು ನಿರ್ಧಾರ ಮಾಡುತ್ತಾಳೆ.

ದೊಡ್ಡಮ್ಮ ವಿಜಯಾಂಬಿಕೆ ಹತ್ತಿರ ಆ ರೂಮಿನ ಬೀಗದ ಕೀ ಇರುವುದು ತಿಳಿದುಕೊಂಡ ಶ್ರಾವಣಿ ರಾತ್ರಿ ಎಲ್ಲರೂ ಮಲಗಿದ ಮೇಲೆ ಧೈರ್ಯ ಮಾಡಿ ದೊಡ್ದಮ್ಮ ಮಲಗಿರುವ ರೂಮಿನಿಂದ ಆ ಬೀಗದ ಕೈಯನ್ನು ತೆಗೆದುಕೊಂಡು ಆ ಸೀಕ್ರೆಟ್ ರೂಮಿನೊಳಗೆ ಹೋಗಿ ಅಲ್ಲಿ ಸಿಕ್ಕ ಕೆಲವು ಪತ್ರಗಳು ಹಾಗು ಒಂದು ಟೆಡ್ಡಿ ಬೇರ್ ಅನ್ನು ತೆಗೆದುಕೊಂಡು ತನ್ನ ರೂಮಿನೊಳಗೆ ಎತ್ತಿಕೊಂಡು ಹೋಗಿ ಇಟ್ಟು, ಪುನಃ ಆ ರೂಮಿನ ಬೀಗ ಹಾಕಿ ಬೀಗದ ಕೈಯನ್ನು ವಾಪಾಸ್ ದೊಡ್ಡಮ್ಮನ ರೂಮಿನೊಳಗೆ ಇಟ್ಟುಬಿಡುತ್ತಾಳೆ.

ಹಳೆಯ ಪತ್ರಗಳಲ್ಲಿ ಅಪ್ಪನ ಪ್ರೀತಿ ಅನಾವರಣ

Shravani reading old letters
Image Credit: ZEE5

ತನ್ನ ರೂಮಿಗೆ ಬಂದ ಶ್ರಾವಣಿ ಆ ರೂಮಿನಲ್ಲಿ ಸಿಕ್ಕ ಪತ್ರಗಳನ್ನು ಓದಲು ಶುರು ಮಾಡುತ್ತಾಳೆ. ಪ್ರತೀ ಪಾತ್ರದಲ್ಲೂ ತನ್ನ ತಂದೆ ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಅವಳಿಗೆ ತಿಳಿಯುತ್ತದೆ. ನಾನು ಹುಟ್ಟಿದ ಆರಂಭದಲ್ಲಿ ಅಪ್ಪ ವೀರೇಂದ್ರನಾಥ ನನ್ನನ್ನು ಇಷ್ಟು ಪ್ರೀತಿಸುತ್ತಿದ್ದರು ಆದರೆ ಈಗ ನನ್ನ ಮುಖ ನೋಡಲು ಸಹ ಅಸಹ್ಯ ಪಡುವ ಮಟ್ಟಿಗೆ ದ್ವೇಷ ಮಾಡಲು ಏನು ಕಾರಣ ಎಂದು ಯೋಚಿಸುತ್ತಾ ಹಾಗೆಯೇ ಸೋಫಾ ಮೇಲೆಯೇ ಮಲಗಿ ಬಿಡುತ್ತಾಳೆ.

ಬೆಳ್ಳಿಗ್ಗೆ ಎಷ್ಟು ಹೊತ್ತಾದರೂ ಶ್ರಾವಣಿಯ ರೂಮಿನ ಬಾಗಿಲು ತೆರೆಯದೇ ಇದ್ದಿದ್ದನ್ನು ನೋಡಿದ ಶ್ರಾವಣಿಯ ಚಿಕ್ಕಮ್ಮನ ಮಗಳು ಬಾಗಿಲನ್ನು ತೆಗೆಯುತ್ತಾಳೆ. ಬಾಗಿಲು ತೆಗೆದ ಆ ಹುಡುಗಿಗೆ ಶ್ರಾವಣಿ ಸೋಫಾ ಮೇಲೆಯೇ ಮಲಗಿರುವುದು ಕಾಣಿಸುತ್ತದೆ. ಸ್ವಲ್ಪ ಹೊತ್ತಿನ ನಂತರ ರೂಮಿನಲ್ಲಿ ಗಾಳಿ ಬೀಸುತ್ತದೆ ಆಗ ಟೇಬಲ್ ಮೇಲೆಯೇ ಇದ್ದ ಆ ಹಳೆಯ ಪತ್ರಗಳಲ್ಲಿ ಒಂದು ಪತ್ರ ಗಾಳಿಗೆ ಹಾರಿಕೊಂಡು ಹೋಗಿ ರೂಮಿನಿಂದ ಆಚೆ ಮಹಡಿ ಮೆಟ್ಟಿಲ ಹತ್ತಿರ ಬಂದು ಬೀಳುತ್ತದೆ. ಅದೇ ಸಮಯಕ್ಕೆ ಅಲ್ಲಿಗೆ ಫ್ರೆಶ್ ಅಪ್ ಆಗಲು ತನ್ನ ರೂಮಿಗೆ ಹೋಗಲು ಬರುವ ವೀರೇಂದ್ರನಾಥನಿಗೆ ಆ ಪತ್ರ ಕಾಣಿಸುತ್ತದೆ.

ಪತ್ರವನ್ನು ನೋಡಿದ ವೀರೇಂದ್ರನಾಥ ಕೆಂಡಮಂಡಲ

Veerendranatha got angry after seeing his old letters.
Image Credit: ZEE5

ಪತ್ರವನ್ನು ನೋಡಿದ ವೀರೇಂದ್ರನಾಥ್ ಜೋರಾಗಿ ಅಕ್ಕ ಅಕ್ಕ ಎಂದು ಕೂಗಿಕೊಳ್ಳುತ್ತಾನೆ ಆಗ ಮನೆಯವರೆಲ್ಲ ಅಲ್ಲಿಗೆ ಬರುತ್ತಾರೆ. ಶ್ರಾವಣಿಯು ಸಹ ನಿದ್ದೆಯಿಂದ ಎಚ್ಚರಗೊಂಡು ಅಲ್ಲಿಗೆ ಬರುತ್ತಾಳೆ. ಆಗ ವೀರೇಂದ್ರನಾಥ ಆ ಪತ್ರವನ್ನು ಹಿಡಿದು ಶ್ರಾವಣಿ ಹತ್ತಿರ ಬಂದು ಯಾಕೆ ನನ್ನನ್ನ ಈ ರೀತಿ ದಿನೇ ದಿನೇ ಹಿಂಸೆ ಕೊಟ್ಟು ಕೊಲ್ತಿದಿಯಾ, ಅದರ ಬದಲು ಒಂದೇ ಸಲ ಸಾಯುಸ್ಬಿದು. ಹಳೇ ನೆನಪುಗಳನ್ನ ಮರಿಬೇಕು ಅಂತೀರೋ ನನಿಗೆ ಮತ್ತೆ ಮತ್ತೆ ಅವುಗಳನ್ನ ನೆನಪು ಮಾಡ್ಕೊಳೋ ಥರ ಯಾಕ್ ಮಾಡ್ತಿದೀಯಾ ಎಂದು ಪ್ರಶ್ನಿಸುತ್ತಾನೆ.

ಅಪ್ಪನ ಮಾತಿಗೆ ಅಳುತ್ತಾ ಶ್ರಾವಣಿ ಧೈರ್ಯ ಮಾಡಿ, ಆ ಪತ್ರದಲ್ಲಿ ನನ್ನ ಮೇಲೆ ಅಷ್ಟೊಂದು ಪ್ರೀತಿ ತೋರಿಸಿದ್ದೀರಾ ಆದರೆ ಈಗ ಯಾಕೆ ನನ್ನ ಮೇಲೆ ಇಷ್ಟೊಂದು ದ್ವೇಷ ಮಾಡ್ತೀರಾ ನಾನೇನ್ ತಪ್ಪ್ ಮಾಡಿದೀನಿ ಎಂದು ಕೇಳುತ್ತಾಳೆ. ಮುಂದೆ ಏನಾಗುತ್ತದೆ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕು.

Similar Posts

Leave a Reply

Your email address will not be published. Required fields are marked *