ಅಪ್ಪನ ಜೊತೆ ಫೋಟೋ ಸಿಕ್ಕ ಖುಷಿಯಲ್ಲಿ ಶ್ರಾವಣಿ ಮೈ ಮರೆತು ಸುಬ್ಬು ಕೆನ್ನೆಗೆ ಕಿಸ್ ಕೊಟ್ಟಳು. ಈ ಘಟನೆ ಬಳಿಕ ಸುಬ್ಬು ಯಾರೊಂದಿಗೂ ಮಾತನಾಡದೆ ಏನೋ ಆದವನಂತೆ ಆಡುತ್ತಿದ್ದಾನೆ. ತಾನು ಕಿಸ್ ಕೊಟ್ಟಿದ್ದಕ್ಕೆ ಸುಬ್ಬು ಈ ರೀತಿ ಆಡುತ್ತಿದ್ದಾನೆ ಎಂದು ಶ್ರಾವಣಿಗೆ ತಿಳಿಯುತ್ತದೆ.

ಸುಬ್ಬುವಿನ ಮನೆಯಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಹೊರಟ ಶ್ರಾವಣಿಯನ್ನು ಕಾರಿನಲ್ಲಿ ಅವರ ಮನೆಗೆ ಡ್ರಾಪ್ ಮಾಡಲು ಸುಬ್ಬು ಹೋಗುತ್ತಾನೆ. ದಾರಿ ಮಧ್ಯದಲ್ಲಿ ಸುಬ್ಬು ಸೈಲೆಂಟ್ ಆಗಿ ಏನೂ ಮಾತನಾಡದೆ ಕಾರನ್ನು ಓಡಿಸುತ್ತಿರುವುದನ್ನು ಗಮನಿಸಿದ ಶ್ರಾವಣಿ ತಮಾಷೆಗೆ ಸುಬ್ಬುಗೆ ಈ ರೀತಿ ಹೇಳುತ್ತಾಳೆ, “ಏನ್ ಸುಬ್ಬು ನಾನು ಕೊಟ್ಟ ಒಂದ್ ಮುತ್ತಿಗೆ ಈ ರೀತಿ ಆಡ್ತಿದಿಯಲ? ಏನ್ ಲವ್ ಹಾ?”.

Subbu and Shravani talking
Image Credit: ZEE5

ಶ್ರಾವಣಿ ಈ ರೀತಿ ಹೇಳಿದ ತಕ್ಷಣ ಸುಬ್ಬು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾರಿಂದ ಹೊರಗೆ ಇಳಿದು ರಸ್ತೆ ಬದಿಗೆ ಬಂದು ನಿಂತು ಕೊಳ್ಳುತ್ತಾನೆ. ಶ್ರಾವಣಿಯು ಸಹ ಕಾರಿನಿಂದ ಕೆಳಗೆ ಇಳಿದು, ಯಾಕೆ ಸುಬ್ಬು ಈ ರೀತಿ ಆಡ್ತಾ ಇದ್ದೀಯ ಎಂದು ಕೇಳುತ್ತಾಳೆ. ಆಗ ಸುಬ್ಬು ಶ್ರಾವಣಿ ಕಡೆಗೆ ಮುಖ ಮಾಡಿ ನಿಂತು ಅಳಲು ಪ್ರಾರಂಭಿಸುತ್ತಾನೆ. ಸುಬ್ಬು ಅಳುತ್ತಿರುವುದನ್ನು ನೋಡಿದ ಶ್ರಾವಣಿ ಯಾಕೆ ಎಂದು ಸುಬ್ಬುನ ಪ್ರಶ್ನಿಸುತ್ತಾಳೆ.

ತನ್ನ ಮನ್ನಸ್ಸಿನಲ್ಲಿರುವ ಭಯವನ್ನು ವ್ಯಕ್ತಪಡಿಸಿದ ಸುಬ್ಬು

Subbu explaining his fear to shravani
Image Credit: ZEE5

ಸುಬ್ಬು ಶ್ರಾವಣಿಗೆ ಈ ರೀತಿ ಹೇಳುತ್ತಾನೆ, “ಮೇಡಂ ನಾನು ನಿಮ್ಮ ಮನೆ ಕೆಲಸದವನು, ಯಜಮಾನರು ನಿಮಗೆ ಕೇವಲ ಅಪ್ಪ ಮಾತ್ರ ಆದರೆ ನಂಗೆ ದೇವರು, ಅವರು ನನ್ನ ಮೇಲೆ ಇಟ್ಟಿರೋ ನಂಬಿಕೆಗೆ ನಾನು ಯಾವತ್ತೂ ಮೋಸ ಮಾಡಲ್ಲ. ಯಜಮಾನ್ರು, ನನ್ನನು ಆ ಮನೆಯಲ್ಲಿ ಒಬ್ಬ ಸದಸ್ಯ ಅಂತ ಹೇಳಿದ್ದಾರೆ ಅದು ಅವರ ದೊಡ್ಡ ಗುಣ ಆದರೆ, ನಾನು ಆ ಮಾತನ್ನು ದುರುಪಯೋಗ ಪಡುಸುದ್ರೆ ನನ್ನ ಸಣ್ಣತನ ಆಗುತ್ತೆ ಮೇಡಂ. ನೀವು ನನಿಗೆ ತಬ್ಬಿಕೊಂಡು ಕಿಸ್ ಕೊಟ್ಟಿದ್ದುನ್ನ ಯಜಮಾನ್ರು ಏನಾದ್ರೂ ನೋಡಿದಿದ್ರೆ ಎಂತ ಅನಾಹುತ ಆಗ್ತಾ ಇತ್ತು. ಪ್ಲೀಸ್ ಮೇಡಂ ಇನ್ಮೇಲಿಂದ ನಾವಿಬ್ರು ಸಲಿಗೆಯಿಂದ ಇರೋದು ಕಮ್ಮಿ ಮಾಡೋಣ ಇದರಿಂದ ಯಾರಿಗೂ ತೊಂದರೆ ಆಗಲ್ಲ.

ವೀರುವನ್ನು ಕೊಲ್ಲಲು ಪ್ಲಾನ್ ಮಾಡಿರುವ ಮಧನ್

Madhan and Vijaya planing to kill veerendranath
Image Credit: ZEE5

ಹಿಂದಿನ ಸಂಚಿಕೆಯಲ್ಲಿ ಅಮ್ಮನ ಹತ್ತಿರ ಮಾತನಾಡುವಾಗ ಮಧನ್, ಮಾವ ವೀರೇಂದ್ರನಾಥ್ ದೇಸಾಯಿಯನ್ನು ಕೊಳ್ಳುವ ಮಾತನ್ನು ಆಡಿದ್ದನು. ಇವತ್ತಿನ ಸಂಚಿಕೆಯಲ್ಲೂ ಅದೇ ಮಾತನ್ನು ಮುಂದುವರೆಸಿದ ಮಧನ್ ಅಮ್ಮ ವಿಜಯನಿಗೆ ಮಾವನನ್ನು ಕೊಲ್ಲುವ ಪ್ರಯತ್ನಕ್ಕೆ ಒಪ್ಪಿಗೆ ನೀಡುವಂತೆ ಕೇಳಿಕೊಳ್ಳುತ್ತಾನೆ. ಆದರೆ, ಮಗನ ಕೆಲಸದ ಮೇಲೆ ನಂಬಿಕೆಯಿಲ್ಲದ ವಿಜಯ ‘No’ ಎಂದು ಹೇಳುತ್ತಾಳೆ. ಆದರೂ ಒತ್ತಾಯ ಮಾಡಿ ಇಲ್ಲ ಈ ಬಾರಿ ನಾನು ನನ್ನ ಕೆಲಸದಲ್ಲಿ ಸಕ್ಸಸ್ ಆಗೇ ಆಗ್ತೀನಿ, ಮಾವನ್ನ ಕೊಂದೇ ಕೊಲ್ಲುತ್ತೀನಿ ಎಂದು ಅಮ್ಮನಿಗೆ ಹೇಳಿ ಹೊರಟು ಹೋಗುತ್ತಾನೆ. ಮಗನ ಈ ಹುಚ್ಚು ನಿರ್ಧಾರವನ್ನು ಕೇಳಿ ವಿಜಯ ಫುಲ್ ಟೆನ್ಶನ್ ಆಗಿಬಿಡುತ್ತಾಳೆ.

Similar Posts

Leave a Reply

Your email address will not be published. Required fields are marked *